ವಾಷಿಂಗ್ ಮೆಷಿನ್‌ಗೆ ಹಾಕಿ ಮಗು ಹತ್ಯೆ

Metally ill mum drowns baby in washing machine
ಅಲಪ್ಪುಳ(ಕೇರಳ), ಸೆ.24: ಕೌಟುಂಬಿಕ ವೈಮನಸ್ಯದಿಂದ 40 ವರ್ಷದ ಮಹಿಳೆಯೊಬ್ಬಳು ತಾನು ಹೆತ್ತ ಕಂದಮ್ಮನನ್ನೇ ವಾಷಿಂಗ್ ಮಿಷನ್‌ಗೆ ಹಾಕಿ ಹತ್ಯೆ ಮಾಡಿರುವ ಘಟನೆ ಕೇರಳದ ಅಲಪ್ಪುಳದಲ್ಲಿ ಬುಧವಾರ ನಡೆದಿದೆ.

ಚೇರ್ತಲದ ಸುಮಾ(40) ಹೆತ್ತ ಮಗುವನ್ನೇ ಕೊಂದ ಮಹಾ ತಾಯಿ. ಪತಿಯ ಜತೆ ವೈಮನಸ್ಯ ಹೊಂದಿದ್ದ ಈಕೆ ಅನಾರೋಗ್ಯ ಪೀಡಿತಳಾಗಿದ್ದಳು. ಇದರ ಜತೆ ಪತಿ ಜತೆಗಿನ ವೈಮನಸ್ಯದಿಂದ ಬೇಸತ್ತು ತಾನು ಈ ಕೃತ್ಯವೆಸಗಿದ್ದಾಗಿ ಸುಮಾ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾಳೆ.ಈಕೆ ಮಾನಸಿಕ ಅಸ್ವಸ್ಥೆಯಾಗಿದ್ದು, ಕೆಲ ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.

ಸುಮಾ ನಿವಾಸದಲ್ಲಿ ವಾಷಿಂಗ್ ಮಿಷಿನ್‌ನಲ್ಲಿ ಬಿದ್ದಿದ್ದ 8 ತಿಂಗಳ ಮಗುವಿನ ದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ಸುಮಾ ತನ್ನ ಮಗುವನ್ನು ಕೊಂದ ನಂತರ ತಾನೂ ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳೆಂದು ಆಕೆಯ ನೆರೆಯ ಮನೆ ನಾಗರಿಕರು ಆರೋಪಿಸಿದ್ದಾರೆ.

ಘಟನೆ ನಡೆದಾಗ ಆಕೆಯ ಪತಿ ಜಾನ್ ಕೆಲಸಕ್ಕೆ ಹೋಗಿದ್ದರು. ಹಿರಿಯ ಮಗಳನ್ನು ಅಜ್ಜನ ಮನೆಗೆ ಹೋಗಲು ಸುಮಾ ಹೇಳಿದ್ದರು. ನಂತರ ಮಗುವನ್ನು ಅಮಾನುಷವಾಗಿ ಹತ್ಯೆಗೈದಿದ್ದಾಳೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ತೀವ್ರಗೊಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+