ಭಾರ್ತಿಯಿಂದ ಮೂರು ಸಿಮ್ ವುಳ್ಳ ಮೊಬೈಲ್

ಭಾರ್ತಿ ಎಂಟರ್ ಪ್ರೈಸಸ್ ನ ಅಂಗ ಸಂಸ್ಥೆ ಬೀಟೆಲ್ ಟೆಲಿಟೆಕ್ ಹೊರ ತಂದಿರುವ 3 ಸಿಮ್ ಫೋನ್ ಗಳನ್ನು ಭಾನುವಾರ(ಸೆ.19)ದಂದು ಮಾರುಕಟ್ಟೆಗೆ ಬಿಡಲಾಯಿತು. ಈ ಮೊಬೈಲ್ ಫೋನ್ ನಲ್ಲಿ QWERTY ಮಾದರಿ ಕೀ ಪ್ಯಾಡ್ ಇದ್ದು, ಗೇಮ್ಸ್ ಆಡಲು ಅನುಕೂಲವಾದ ರಚನೆ ಹೊಂದಿದೆ. 3 ಸಿಮ್ ಗಳನ್ನು ಹೊಂದಿರುವ ಈ ಮೊಬೈಲ್ ನಲ್ಲಿ 2 ಜಿಎಂಎಂ ಹಾಗೂ 1 ಸಿಡಿಎಂಎ ಸಿಮ್ ಹಾಕಿಕೊಳ್ಳಬಹುದು.
3ಜಿ ಸೌಲಭ್ಯ ಹೊಂದಿರುವ ಈ ಮೊಬೈಲ್, ಗ್ರಾಹಕ ಸ್ನೇಹಿಯಾಗಿ ಜನಪ್ರಿಯತೆ ಗಳಿಸಲಿದೆ ಎಂಬ ವಿಶ್ವಾಸವನ್ನು ಬೀಟಲ್ ಟೆಲಿಟೆಕ್ ನ ಮುಖ್ಯ ನಿರ್ವಾಹಕ ವಿನೋದ್ ಸಹನಿ ವ್ಯಕ್ತಪಡಿಸಿದ್ದಾರೆ.
ಸುಲಭದಲ್ಲಿ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಅರ್ಕುಟ್ , ಟ್ವೀಟ್ಟರ್ ಗಳನ್ನು ಸಂಪರ್ಕಿಸಬಹುದು. ಪುಟ್ಟ ಒಪೆರಾ ವೆಬ್ ಬ್ರೌಸರ್ ಸಹ ಹೊಂದಿದೆ. ಈ ಮೊಬೈಲ್ ಗಳ ಬೆಲೆ 1,750 ರಿಂದ 7,000 ವರೆಗೂ ಇದೆ. ಇದರಲ್ಲಿ 2ಜಿ ಹಾಗೂ 3ಜಿ ಸೌಲಭ್ಯದ ಮೊಬೈಲ್ ಗಳು ಸೇರಿವೆ. ಎಸ್ ಎಂಎಸ್ ,ಎಂಎಂಎಸ್, ಜಿಪಿಆರ್ ಎಸ್ ಜೊತೆಗೆ ವಿಎಎಸ್ ಅಡಿಯಲ್ಲಿ ನಿಮ್ ಬಜ್, ಫೇಸ್ ಬುಕ್ ಮುಂತಾದ ತಾಣಗಳ ಸಂಪರ್ಕ ಸಾಧಿಸಬಹುದು.












Click it and Unblock the Notifications