ಮುಖ್ಯಮಂತ್ರಿಗಳ ಚೀನಾ ಪ್ರವಾಸ ಫಲಪ್ರದ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ನಿಯೋಗವು ಇಂದು ಚೀನಾದ ಟಿಯಾನ್‌ಜಿನ್ ವಿಶೇಷ ವಿತ್ತ ವಲಯಕ್ಕೆ ಭೇಟಿ ನೀಡಿ ವಿವಿಧ ಕ್ಷೇತ್ರಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ಕೈಗೊಂಡಿತು.
ಟಿ.ಎನ್.ಬಿ.ಎ. ಎಂದೇ ಪ್ರಖ್ಯಾತವಾಗಿರುವ ಟಿಯಾನ್‌ಜಿನ್ ಬಿನ್‌ಹಾಯ್ ನ್ಯೂ ಏರಿಯಾವು 2400 ಚದರ ಕಿಲೋ ಮೀಟರ್‌ಗಳಿಗೂ ಅಧಿಕ ವಿಸ್ತಾರದ ಬೃಹತ್ ವಿಶೇಷ ವಿತ್ತ ವಲಯವಾಗಿದ್ದು, ಈ ಪ್ರದೇಶದಲ್ಲಿ ಸುಮಾರು 25 ಲಕ್ಷ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬೀಜಿಂಗ್‌ನಿಂದ ಸುಮಾರು 200 ಕಿ.ಮೀಗಳಷ್ಟು ದೂರದಲ್ಲಿರುವ ಈ ಕರಾವಳಿ ಪ್ರದೇಶದ ವಿಶೇಷ ವಿತ್ತ ವಲಯವು ಸೂಪರ್‌ಫಾಸ್ಟ್ ರೈಲು ಸಂಪರ್ಕದ ಜೊತೆಗೆ ವಿಮಾನ ನಿಲ್ದಾಣ ಹಾಗೂ ಬಂದರನ್ನು ಹೊಂದಿದೆ. ಈ ವಿಶೇಷ ವಿತ್ತ ವಲಯದಲ್ಲಿ ಐಟಿ, ಆಟೋಮೊಬೈಲ್, ತೈಲ, ಹಸಿರು ಆಹಾರ, ಬಯೋಫಾರ್ಮ, ಮೆಟಲರ್ಜಿ, ನವೀನ ಇಂಧನ, ಹೊರಗುತ್ತಿಗೆ ಮುಂತಾದ ಕ್ಷೇತ್ರಗಳ ಬೃಹತ್ ಉದ್ಯಮಗಳಿದ್ದು, ಕರ್ನಾಟಕದ ನಿಯೋಗವು ಈ ಎಲ್ಲಾ ಉದ್ಯಮಗಳ ಜೊತೆ ದ್ವಿಪಕ್ಷೀಯ ಉಪಕ್ರಮಗಳ ಬಗ್ಗೆ ವಿಸ್ತೃತ ಚರ್ಚೆ ಕೈಗೊಂಡಿತು.
ಮುಖ್ಯಮಂತ್ರಿಗಳ ನೇತೃತ್ವದ ನಿಯೋಗವು ಹಲವಾರು ಜಾಗತಿಕ ಉದ್ಯಮಿಗಳೊಂದಿಗೂ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಪೂರ್ವಭಾವಿ ಮಾತುಕತೆ ನಡೆಸಿದೆ.
ನೆಸ್ಲೆ ಅಧ್ಯಕ್ಷರ ಜೊತೆ ಚರ್ಚೆ:ನೆಸ್ಲೆ ಕಂಪನಿಯ ಅಧ್ಯಕ್ಷಪೀಟರ್ ಬ್ರಬೆಕ್ ಲೆಟ್‌ಮಾತೆ ಇವರೊಂದಿಗೆ ಈಗಾಗಲೇ ನಂಜನಗೂಡಿನಲ್ಲಿ ನಿರ್ಮಾಣವಾಗುತ್ತಿರುವ ನೆಸ್ಲೆ ಘಟಕದ ವಿಸ್ತರಣೆಯ ಬಗ್ಗೆ ಚರ್ಚಿಸಲಾಯಿತು. ಬೆಂಗಳೂರಿನಲ್ಲಿ ಅಕ್ಟೋಬರ್ 2010 ರಲ್ಲಿ ವಿಶ್ವ ಆರ್ಥಿಕ ಒಕ್ಕೂಟ ಹಾಗೂ ಎ.ಡಿ.ಬಿ. ಸಹಯೋಗದೊಂದಿಗೆ ಜಲಕ್ಷೇತ್ರದ ಸಭೆಯನ್ನು ಹಾಗೂ ಜನವರಿ 2011 ರಲ್ಲಿ ಕೃಷಿ ಬಂಡವಾಳ ಹೂಡಿಕೆ ಸಮಾವೇಶವನ್ನು ಹಮ್ಮಿಕೊಳ್ಳುವ ಬಗ್ಗೆಯೂ ಚರ್ಚಿಸಲಾಯಿತು.
ದುಬೈ ಮತ್ತು ಮಧ್ಯಪೂರ್ವ ರಾಷ್ಟ್ರಗಳ ಪ್ರಮುಖ ರಿಯಲ್ ಎಸ್ಟೇಟ್ ಮತ್ತು ಹೊಟೇಲ್ ಉದ್ಯಮವಾದ ಜುಮೇರಾ ಸಮೂಹದ ಅಧ್ಯಕ್ಷ ಜರಾಲ್ಡ್ ಲಾಲೆಸ್‌ರವರು ಕರ್ನಾಟಕದ ನಿಯೋಗದೊಂದಿಗೆ ಚರ್ಚಿಸಿ ತಮ್ಮ ಉದ್ಯಮವನ್ನು ಕರ್ನಾಟಕ ರಾಜ್ಯದಲ್ಲಿ ವಿಸ್ತರಿಸುವ ಬಗ್ಗೆ ಆಸಕ್ತಿ ತೋರಿದರು.
ಜಿಂಬಾಬ್ವೆ ಉಪ ಪ್ರಧಾನಿ ಭೇಟಿ :ಜಿಂಬಾಬ್ವೆ ದೇಶದ ಉಪ ಪ್ರಧಾನಿಆರ್ಥರ್ ಮುಟಂಬರ ಅವರನ್ನು ಯಡಿಯೂರಪ್ಪನವರ ನೇತೃತ್ವದ ನಿಯೋಗವು ಭೇಟಿ ಮಾಡಿತು. ಜಿಂಬಾಬ್ವೆ ದೇಶದ ಯುವಕರಿಗೆ ಕೌಶಲ್ಯ ತರಬೇತಿ ನೀಡುವಂತೆ ಕರ್ನಾಟಕದ ನಿಯೋಗದ ಸಹಕಾರವನ್ನು ಬಯಸಿದ ಉಪ ಪ್ರಧಾನಿಗಳು, ಬೆಂಗಳೂರಿನ ಉದ್ದೇಶಿತ 2011ರ ಜನವರಿಯ ಕೃಷಿ ಬಂಡವಾಳ ಹೂಡಿಕೆ ಸಭೆಯಲ್ಲಿ ಜಿಂಬಾಬ್ವೆಯು ಭಾಗವಹಿಸುವುದಾಗಿ ಭರವಸೆ ನೀಡಿದರು.
ದ್ವಿಪಕ್ಷೀಯ ಚರ್ಚೆ: ಕೌಲಾಲಂಪುರ ಹಾಗೂ ಇತರೆ ಹಲವಾರು ರಾಷ್ಟ್ರಗಳಲ್ಲಿ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಸಂಪರ್ಕಕ್ಕೆ ಪ್ರಖ್ಯಾತಿ ಪಡೆದಿರುವ ಕ್ಯೂ1 ಸಂಸ್ಥೆಯ ನಿರ್ವಾಹಕ ಅಧ್ಯಕ್ಷ ವಿಜಯ್ ಈಶ್ವರನ್ ರವರೊಂದಿಗೆ ಮುಖ್ಯಮಂತ್ರಿಗಳ ನಿಯೋಗ ದ್ವಿಪಕ್ಷೀಯ ಚರ್ಚೆ ಕೈಗೊಂಡಿತು. ಕರ್ನಾಟಕದಲ್ಲಿಯೂ ತಮ್ಮ ಟೆಲಿಕಾಮ್ ಕ್ಷೇತ್ರದ ಉಪಕ್ರಮಗಳನ್ನು ವಿಸ್ತರಿಸಲು ಆಸಕ್ತಿ ತೋರಿಸಿದ ವಿಜಯ್ ಈಶ್ವರನ್ ರವರು ಕೌಲಾಲಂಪುರನಲ್ಲಿ 2010ರ ನ.22 ಮತ್ತು 23ರಂದು ಹಮ್ಮಿಕೊಂಡಿರುವ ಕಾಮನ್‌ವೆಲ್ತ್ ಬಿಸಿನೆಸ್ ಫೋರಂನಲ್ಲಿ ಭಾಗವಹಿಸುವಂತೆ ಕರ್ನಾಟಕದ ನಿಯೋಗವನ್ನು ಆಹ್ವಾನಿಸಿದರು.
ಬಂಡವಾಳ ಹೂಡಲು ಆಸಕ್ತಿ: ವೆಲ್‌ಸ್ಪನ್ ಸಮೂಹದ ವಿನಿತ್ ಮಿಟ್ಟಲ್‌ರವರೊಂದಿಗೂ ಕರ್ನಾಟಕದ ನಿಯೋಗ ಮಾತುಕತೆ ನಡೆಸಿತು. ವೆಲ್‌ಸಮ್ ಸಮೂಹದವರು ಕರ್ನಾಟಕ ರಾಜ್ಯದಲ್ಲಿ ಉಕ್ಕು, ವಸ್ತ್ರ, ಬೃಹತ್ ನೀರು ಸರಬರಾಜು, ಸೌರ ಇಂಧನ, ಉಷ್ಣ ಇಂಧನ, ರಸ್ತೆ ಅಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಬಂಡವಾಳ ಹೂಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications