ಅಪ್ರಾಪ್ತಳ ಮೇಲೆ ದಿಲ್ಷಾನ್ ಅತ್ಯಾಚಾರ?

ಕಳೆದ ಜೂನ್ ತಿಂಗಳಲ್ಲಿ ತಿಲಕರತ್ನೆ ದಿಲ್ಷಾನ್ ನೇತೃತ್ವದ ಶ್ರೀಲಂಕಾ ಕ್ರಿಕೆಟ್ ತಂಡ ಜಿಂಬಾವ್ವೆ ಪ್ರವಾಸ ಕೈಗೊಂಡಿತ್ತು. ಆ ಸಂದರ್ಭದಲ್ಲಿ ಸ್ಪೋಟಕ ಆರಂಭಿಕ ಆಟಗಾರ ತಿಲಕರತ್ನೆ ದಿಲ್ಷಾನ್, ಜೀವನ್ ಮೆಂಡಿಸ್ ಮತ್ತು ದಿಲ್ಹಾರ್ ಫೆರ್ನಾಂಡೊ ನೈಟ್ ಕ್ಲಬ್ ಒಂದಕ್ಕೆ ಭೇಟಿ ನೀಡಿದ್ದರು. ಅಲ್ಲಿ 17 ವರ್ಷದ ಬಾಲಕಿಯನ್ನು ಅಪಹರಿಸಿದ ದಿಲ್ಷಾನ್ ಒಬ್ಬರೇ ಅಜ್ಞಾತ ಸ್ಥಳದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ತಿಳಿದುಬಂದಿತ್ತು. ಆದರೆ ಅಧಿಕಾರಿಗಳ ಮಧ್ಯ ಪ್ರವೇಶದ ನಂತರ ಪ್ರಕರಣ ಮುಚ್ಚಿ ಹಾಕಲಾಗಿತ್ತು ಎನ್ನುವ ವಿಷಯ ಈಗ ಬಹಿರಂಗಗೊಂಡಿದೆ.
ಆ ಪ್ರಕರಣದಲ್ಲಿ ದಿಲ್ಷಾನ್ ಅವರನ್ನು ಬಂಧಿಸಿದ್ದ ಪೊಲೀಸರು 24 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಆಗ ತಕ್ಷಣ ಶ್ರೀಲಂಕಾ ಕ್ರಿಕೆಟ್ ಮಧ್ಯಂತರ ಸಮಿತಿ, ಉನ್ನತ ಪೋಲಿಸ್ ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಮಧ್ಯಪ್ರವೇಶಿಸಿ ಸುದ್ದಿಯನ್ನು ಮುಚ್ಚಿಹಾಕಿದ್ದರು. ರೇಪ್ ಪ್ರಕರಣವನ್ನು ಮುಚ್ಚಿಹಾಕಲು 13 ಸಾವಿರ ಡಾಲರ್ ಹಣ ನೀಡಿ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲಾಗಿತ್ತು ಎಂಬುದಾಗಿ ತಿಳಿದು ಬಂದಿದೆ.
ಈಗ ಕಾರ್ಯಪ್ರವತ್ತರಾಗಿರುವ ಜಿಂಬಾವ್ವೆ ಸರಕಾರ ದಿಲ್ಷಾನ್ ತಮ್ಮ ದೇಶ ಪ್ರವೇಶಿಸದಂತೆ ನಿಷೇದ ವಿಧಿಸಿದೆ. ಶ್ರೀಲಂಕಾ ಸರಕಾರಕ್ಕೆ ಸಂದೇಶ ರವಾನೆಯಾಗಿದ್ದು ಸರಕಾರದ ನಿರ್ಧಾರಕ್ಕೆ ಶ್ರೀಲಂಕಾ ಆತಂಕ ವ್ಯಕ್ತಪಡಿಸಿದೆ. ಈ ಘಟನೆ ಕುರಿತಂತೆ ತಮಗೆ ಯಾವುದೇ ಮಾಹಿತಿಯಿಲ್ಲ ಎಂದು ಶ್ರೀಲಂಕಾ ಸರಕಾರ ಸ್ಪಷ್ಟನೆ ನೀಡಿದೆ.












Click it and Unblock the Notifications