ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶರಣಾದ ನಕ್ಸಲಿಗೆ ಮಾಸಿಕ ರು.2,000 ಸಹಾಯಧನ

By Rajendra
|
Google Oneindia Kannada News

Naxalites
ಬೆಂಗಳೂರು, ಸೆ.4: ಕರ್ನಾಟಕ ರಾಜ್ಯದ ಮಲೆನಾಡು ಜಿಲ್ಲೆಯ ಕೆಲವು ಭಾಗಗಳಲ್ಲಿ ಎಡಪಂಥೀಯ ಉಗ್ರಗಾಮಿಗಳ ಚಟುವಟಿಕೆಗಳು ಗಮನಕ್ಕೆ ಬಂದಿವೆ. ಕರ್ನಾಟಕ ಸರ್ಕಾರ ಈ ಸಮಸ್ಯೆಯನ್ನು ಎರಡು ರೀತಿಯಿಂದ ಬಗೆಹರಿಸಲು ಯತ್ನಿಸಿದೆ.

ಈವರೆಗಿನ ನಮ್ಮ ಅನುಭವದಲ್ಲಿ ಯುವಕರನ್ನು ಉಗ್ರಗಾಮಿ ಮಾರ್ಗ ಸೇರಲು ಹಾದಿ ತಪ್ಪಿಸಲಾಗುತ್ತಿದೆ. ಈ ರೀತಿ ದಾರಿ ತಪ್ಪಿ ಹಿಂಸಾತ್ಮಕ ಮಾರ್ಗಗಳಿಗೆ ಹೋಗದಂತೆ ಸದವಕಾಶ ನೀಡಲು ಸರ್ಕಾರವು ಶರಣಾಗತಿ ಮತ್ತು ಪುನರ್ವಸತಿ ಕಾರ್ಯನೀತಿಗೆ ಸರ್ಕಾರ ಆದೇಶ ಹೊರಡಿಸಿದೆ.

ಶರಣಾಗತರಾದವರು ವೃತ್ತಿಪರ ತರಬೇತಿ ಹೊಂದಲು ಅರ್ಹರಾಗಿದ್ದು ಅವರಿಗೆ ಒಂದು ವರ್ಷಕಾಲ ಮಾಸಿಕ ರೂ. 2000 ನಿಯತಕಾಲಿಕ ಸಹಾಯಧನ ನೀಡಲಾಗುವುದು. ಶರಣಾಗತರು ಅನುದಾನ ರೀತಿಯ ಸಾಲವಾಗಿ ರೂ.2,00,000ಗಳನ್ನು ಪಡೆಯಬಹುದು.

ಶರಣಾಗತರು ಆಯುಧಗಳು, ಸ್ಫೋಟಕ ವಸ್ತುಗಳು ಮತ್ತು ಸಂಪರ್ಕ ಸಾಧನಗಳನ್ನು ಒಪ್ಪಿಸಿದರೆ ರೂ. 500 ರಿಂದ 25,000 ವರೆಗೆ ನಗದು ಬಹುಮಾನ ನೀಡಲಾಗುವುದು. ಇತರೆ ಉಗ್ರಗಾಮಿಗಳನ್ನು ಹಿಡಿಯಲು ಶರಣಾಗರು ಮಾಹಿತಿ ನೀಡಿದರೆ, ಅವರಿಗೆ ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗುವುದು.

ಶರಣಾಗತರಾದವರ ವಿರುದ್ದ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಸಹಾನುಭೂತಿಯಿಂದ ಪರಿಶೀಲಿಸಲಾಗುವುದು. ಈ ಶರಣಾಗತಿಯ ಕಾರ್ಯನೀತಿಯ ಕರ್ನಾಟಕ ರಾಜ್ಯಕ್ಕೆ ಸೇರಿದ ವ್ಯಕ್ತಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಈ ಕಾರ್ಯನೀತಿಯು ಮೇ 2011 ರವರೆಗೆ ಲಭ್ಯವಿರುತ್ತದೆಂದು ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರವರ ಕಛೇರಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X