ರಷ್ಯಾದಲ್ಲಿ ದೇವರೊವ್ನೆ ನೀ ನೈಂಟಿ ಹೊಡಿ ಗಾನ

"ಮಹಾ ಜನಗಳೆ, ನೀವು ದಿನಕ್ಕೆ ಒಂದು ಪ್ಯಾಕ್ ಸಿಗರೇಟ್ ಸೇದಿದರೆ ಸಾಕು ದೇಶದ ಸಾಮಾಜಿಕ ಸಮಸ್ಯೆಗಳು ತಾನೇ ತಾನಾಗಿ ಪರಿಹಾರವಾಗುತ್ತದೆ. ಜನನ ನಿಯಂತ್ರಣದಲ್ಲಿರುತ್ತದೆ. ಸರ್ಕಾರಕ್ಕೆ ಹೆಚ್ಚು ತೆರಿಗೆ ಸಿಗುತ್ತದೆ. ಕುಡುಕರು ಹಾಗೂ ಧೂಮಪಾನಿಗಳಿಂದ ನಾಡಿಗೆ ಹೆಚ್ಚಿನ ಲಾಭವುಂಟು. ಇವರೇ ನಿಜವಾದ ಸಮಾಜ ಸೇವಕರು ಎಂಬುದನ್ನು ತಿಳಿದುಕೊಳ್ಳಿ . ಆದ್ದರಿಂದ ಹೆಚ್ಚೆಚ್ಚುಧೂಮಪಾನ, ಮದ್ಯವ್ಯಸನಿಗಳಾಗಲು ಪ್ರಯತ್ನಿಸಿ" ಎಂದಿದ್ದಾರೆ.
ರಷ್ಯಾದಲ್ಲಿ ಶೇ.65 ಮಂದಿ ಸಿಗರೇಟ್ ಚುಟ್ಟಾ ಸೇದುವ ಧೂಮಪಾನಿಗಳು ಹಾಗೂ ವಾರ್ಷಿಕವಾಗಿ 18 ಲೀ ಆಲ್ಕೋಹಾಲ್ ಖಾಲಿ ಮಾಡುವ ಜನರಿದ್ದಾರೆ ಎಂದು ದ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ರಷ್ಯಾದ ಮಹಾನ್ ಚಳಿಗೋ ,ಚಟಕ್ಕೋ ಮದ್ಯ ಸೇವನೆ ಅಧಿಕವಾಗಿ ಅರ್ಧ ಆಯಸ್ಸಿನಲ್ಲೇ ಸಾಯುವವರ ಸಂಖ್ಯೆ ವರ್ಷಕ್ಕೆ ಸುಮಾರು 500,000 ಮೀರುತ್ತದೆ. ರಷ್ಯದ ಸಚಿವರ ಮಾತುಗಳನ್ನು ಜನ ಹೇಗೆ ಆರ್ಥಮಾಡಿಕೊಳ್ಳುತ್ತಾರೋ ಕಾದು ನೋಡಬೇಕು. ಒಟ್ಟಿನಲ್ಲಿ ನಮ್ಮ ಭಟ್ಟರು ಇಲ್ಲಿ ಗೀಚಿದ್ದು ಗಡಿ, ದೇಶ, ಭಾಷೆ, ಖಂಡ ದಾಟಿದೆ ಎನ್ನಲಡ್ಡಿಯಿಲ್ಲ. ಕುಡುಕರು ಎಲ್ಲಿದ್ದರೂ ಕುಡುಕರೇ ನಮ್ಮ ರತ್ನ ಒಬ್ಬನ್ ಬಿಟ್ಟು.












Click it and Unblock the Notifications