ಬಲವಂತವಾಗಿ ಶಾಲೆ ತೊರೆದ ಲಂಬೂ ಹುಡ್ಗಿ

ಎಲಿಸಾನಿ ಸಿಲ್ವಾ ಎಂಬ 14 ವರ್ಷದ ಬಾಲಕಿ ವಿಚಿತ್ರ ಕಾಯಿಲೆಯ ಕಾರಣದಿಂದ ಯದ್ವಾ ತದ್ವಾ ಬೆಳೆಯತೊಡಗಿದ್ದು, ಶೈಕ್ಷಣಿಕ ಅಭ್ಯಾಸಕ್ಕೆ ಕಟಂಕವಾಗಿದೆ. ಆದರೆ, ಇದರಿಂದ ಧೃತಿಗೆಡದ ಆಕೆ, ತನ್ನ ಎತ್ತರವನ್ನು ಸದುಪಯೋಗ ಪಡಿಸಿಕೊಳ್ಳಲು ಯೋಚಿಸಿದ್ದಾಳೆ. ಶೀಘ್ರದಲ್ಲೇ ಮಾಡೆಲಿಂಗ್ ಜಗತ್ತಿಗೆ ಕಾಲಿರಿಸಿ, ತಲೆ ಎತ್ತಿ ಬೆಕ್ಕಿನ ನಡಿಗೆ ಇಡಲು ಸಿದ್ಧತೆ ನಡೆಸಿದ್ದಾಳೆ.
ಆದರೂ ಎಲ್ಲರೂ ಶಾಲೆಗೆ ಹೋಗುವಾಗ ಮನೆಯಲ್ಲಿ ಕೂತಿರುವುದು ಬೇಸರ ತರಿಸುತ್ತದೆ. ಮನೆಯ ಸೀಲಿಂಗ್ ಕೂಡಾ ತಲೆಗೆ ಬಡಿದು ಬಡಿದು ನನ್ನ ಕೋಪ, ಹತಾಶೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ ಎಂದು ಸ್ಥಳೀಯ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ದುಃಖ ತೋಡಿಕೊಂಡಿದ್ದಾಳೆ.
ಎಲಿಸಾನಿಗೆ 12 ವರ್ಷದ ತಲಿಸಿಯಾ ಎಂಬ ತಂಗಿಯಿದ್ದು ಆಕೆ ಕೂಡಾ ಸಾಕಷ್ಟು ಎತ್ತರವಾಗೇ ಇದ್ದು, ತನ್ನ ಅಕ್ಕನಂತೆ ವರ್ಷಕ್ಕೆ ಆರು ಇಂಚು ಬೆಳೆದರೆ ಏನು ಗತಿ ಎಂದು ಇವರ ಪೋಷಕರು ಚಿಂತಿತರಾಗಿದ್ದಾರೆ.












Click it and Unblock the Notifications