5 ರುಪಾಯಿ ಕೊಡಿ ಬೆನ್ಜ್ ಬಸ್ ಲ್ಲಿ ಓಡಾಡಿ
ಬೆಂಗಳೂರು,
ಆ. 29 : ನಗರದ ಜನತೆ ಐದು ರುಪಾಯಿ ನೀಡಿ ಮರ್ಸಿಡಿಸ್ ಬೆನ್ಜ್ ಹೈಟೆಕ್ ಬಸ್ ನಲ್ಲಿ ಪ್ರಯಾಣಿಸಬಹುದು. ಇದು ಬಿಎಂಟಿಸಿಯ ಹೊಸ ಕೊಡುಗೆ. ಬಿಎಂಟಿಸಿ ಮರ್ಸಿಡಿಸ್ ಬೆನ್ಜ್ ಬಸ್ ಗಳನ್ನು ಪ್ರಾಯೋಗಿಕವಾಗಿ ರಸ್ತೆಗಿಳಿಸಿದ್ದು, ಸಾರಿಗೆ ಸಚಿವ ಆರ್ ಅಶೋಕ್ ಶಾಂತಿನಗರ ನಿಲ್ದಾಣದಲ್ಲಿ ಶನಿವಾರ ಚಾಲನೆ ನೀಡಿದ್ದಾರೆ. id="toptextpromo">ಈ
ಬಸ್ ಗಳು ವೋಲ್ವೊ ಮಾದರಿ ಬಸ್ ದರದಲ್ಲಿ ಮುಂದಿನ ಎರಡು ತಿಂಗಳು ಸಂಚರಿಸಲಿವೆ. ಮೂರು ದಿನಗಳವರೆಗೆ ಟಿಕೆಟ್ ದರವನ್ನು ಕೇವಲ 5 ರುಪಾಯಿ ನಿಗದಿಪಡಿಸಲಾಗಿದೆ. ಈಗ 5 ರುಪಾಯಿ ಪ್ರಯಾಣದ ಕೊಡುಗೆ ಆ.30ರವರೆಗೆ ಮಾತ್ರ. ಎರಡು ಬಸ್ ಗಳು ಮೆಜಿಸ್ಟಿಕ್ ನಿಂದ ಕಾಡುಗೋಡಿ, ಎಲೆಕ್ಟ್ರಾನಿಕ್ ಸಿಟಿ, ವಿಜಯನಗರ, ಐಟಿಪಿಎಲ್, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಜೆಪಿ ನಗರದ 6ನೇ ಹಂತದ ಮಾರ್ಗದಲ್ಲಿ ಸಂಚರಿಲಿಸಲಿವೆ. id='are-slot-1' class='oiad oi-axt oiadv'> id='top-searched-articles'>ಬಸ್
ಚಾಲನೆ ಮಾಡಿ ಮಾತನಾಡಿದ ಅಶೋಕ್, ಬೆಂಗಳೂರು ಮೈಸೂರು ಮಧ್ಯೆ ಪ್ರಾಯೋಗಿಕವಾಗಿ ಬೆನ್ಜ್ ಬಸ್ ಸೇವೆಯನ್ನು ಆರಂಭಿಸಲಾಗಿದ್ದು, ಸಾರ್ವಜನಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೂರದ ಊರುಗಳಿಗೂ ಕೆಎಸ್ಆರ್ ಟಿಸಿ ಇನ್ನೂ 10 ಹೊಸ ಬೆನ್ಜ್ ಬಸ್ ಗಳ ಸಂಚಾರ ಆರಂಭಿಸಲಿದೆ ಎಂದರು.











Click it and Unblock the Notifications