ಎಚ್ ಎಎಲ್ ವಾಯುಪಡೆ ಹೆಲಿಕಾಪ್ಟರ್ ಅಪಘಾತ

Helicopter crash at HAL, Bengaluru
ಬೆಂಗಳೂರು, ಆ. 27: ನಗರದ ಎಚ್ ಎಎಲ್ ನ ರೋಟರಿ ವಿಂಗ್ ಅಕಾಡೆಮಿ ಗೇಟ್ 30 ರ ಬಳಿ ಇಂದು ಬೆಳಗ್ಗೆ 9.15ರ ಸುಮಾರಿಗೆ ಹೆಲಿಕಾಪ್ಟರ್ ಅಪಘಾತ ಸಂಭವಿಸಿದೆ.

ಎರಡು ಸೀಟುಗಳುಳ್ಳ ಚೇತಕ್ ಹೆಲಿಕಾಪ್ಟರ್ ವಿಟಿ ಇಐವಿ ಮೇಲಕ್ಕೆ ಹಾರಿದ ಕೆಲ ಹೊತ್ತಲ್ಲೇ ನೆಲಕ್ಕುರುಳಿದೆ. ಸುಮಾರು 10 ಅಡಿ ಎತ್ತರದಿಂದ ನೆಲಕ್ಕಪ್ಪಳಿಸಿದ ಹೆಲಿಕಾಪ್ಟರ್ ನಲ್ಲಿದ್ದ ಮುಖ್ಯ ಪೈಲಟ್ ಹಾಗೂ ಸಹ ಪೈಲಟ್ ಗೆ ತೀವ್ರ ಗಾಯಗಳಾಗಿದ್ದು, ವಾಯುಪಡೆ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ

ಮುಖ್ಯಪೈಲಟ್ ಗೆ ಹೆಲಿಕಾಪ್ಟರ್ ಚಾಲನೆಯಲ್ಲಿ ಕೆಲ ಗಂಟೆಗಳ ಅನುಭವ ಮಾತ್ರ ಇತ್ತು. ಸಹ ಪೈಲಟ್ ಈಗಿನ್ನೂ ತರಬೇತಿ ಪಡೆಯುತ್ತಿದ್ದರು ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಹತ್ತಿರದಲ್ಲೇ ಅಗ್ನಿಶಾಮಕದಳದವರು ಇದ್ದ ಕಾರಣ, ಅಪಘಾತ ನಡೆದ ಸ್ಥಳಕ್ಕೆ ಕೂಡಲೇ ಧಾವಿಸಿ ಬಂದು ನೆರವು ನೀಡಿದ್ದಾರೆ.

ಅಪಘಾತಕ್ಕೆ ಮೂಲ ಕಾರಣ ಏನು ಎಂದು ಇನ್ನೂ ತಿಳಿದಿಲ್ಲ. ತಾಂತ್ರಿಕ ದೋಷ ಹಾಗೂ ಪೈಲಟ್ ಗಳ ಅನನುಭವವೇ ಕಾರಣ ಎನ್ನಲಾಗಿದೆ. ಗಾಯಾಳುಗಳನ್ನು ವೀಕ್ಷಿಸಲು ಕಮಾಂಡೋ ಆಸ್ಪತ್ರೆಯವರು ಮಾಧ್ಯಮದವರಿಗೆ ಅವಕಾಶ ನೀಡಲು ನಿರಾಕರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+