ವಿಕಿಲೀಕ್ಸ್ ನಿಂದ ಸಿಐಎ ದಾಖಲೆ ಬಹಿರಂಗ

ಬುಧವಾರ(ಆ.25)ರಂದು ಬಹಿರಂಗಗೊಳಿಸಲಾಗಿರುವ ಫೆ.2, 2010 ದಿನಾಂಕದ ತಲೆಬರಹ ವಿರುವ ಮೂರು ಪುಟಗಳ ಕಡತದಲ್ಲಿ ವಿದೇಶರು "ಅಮೆರಿಕನ್ನರನ್ನು ಭಯೋತ್ಪಾದಕರಂತೆ ಕಂಡರೆ ಹೇಗೆ " ಎಂಬ ವಿಷಯವಾಗಿ ಹೇಳಲಾಗಿದೆ ಎಂದು ಸಿಎನ್ ಎನ್ ವರದಿ ಮಾಡಿದೆ.
2008ರ ಮುಂಬೈ ಉಗ್ರರ ದಾಳಿ ರುವಾರಿ ಡೇವಿಡ್ ಹೆಡ್ಲಿ, 1994ರಲ್ಲಿ ಪ್ಯಾಲೆಸ್ಟೈನ್ನರ ಹತ್ಯೆಗೈದ ಜ್ಯೂಯಿಷ್ ಉಗ್ರವಾದಿ ಬರೂಕ್ ಗೋಲ್ಡ್ ಸ್ಟೈನ್ ಮುಂತಾದವರ ಅಮೆರಿಕ ನಂಟಿನ ಬಗ್ಗೆ ಪ್ರಸ್ತಾಪಿಸಲಾಗಿದೆ. ಸದ್ಯಕ್ಕೆ ಮೂರು ಪುಟದ ಮುನ್ನೋಟ ನೀಡಲಾಗಿದೆ. ಈ ವಿಷಯವಾಗಿ ಸುಅಮರು 15 ಸಾವಿರ ಪುಟಗಳ ಯುದ್ಧ ರಹಸ್ಯಗಳನ್ನು ಬಹಿರಂಗಗೊಳಿಸುವುದಾಗಿ ವಿಕಿಲೀಕ್ಸ್ ಹೇಳಿಕೊಂಡಿದೆ.
ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಐಎ ವಕ್ತಾರೆ ಮೇರಿ ಹಾರ್ಫ್ , ಇದೆಲ್ಲಾ ಜನರನ್ನು ಪ್ರಚೋದಿಸಲು ಹೂಡಿರುವ ತಂತ್ರ , ಈ ವರದಿಗಳು ಸತ್ಯಕ್ಕೆ ದೂರವಾಗಿದೆ. ಅಮೆರಿಕ ಸೈನಿಕರ ಧೃತಿಗೆಡಿಸಲು ಹೂಡಿರುವ ಸಂಚು ಎಂದಿದ್ದಾರೆ.
ಅಮೆರಿಕ ಹಾಗೂ ಅಫ್ಘನ್ ಯುದ್ಧದ ರಹಸ್ಯ ವುಳ್ಳ ಸುಮಾರು 92,000 ದಾಖಲೆಗಳನ್ನು ವಿಕಿಲೀಕ್ಸ್ ಬಹಿರಂಗಪಡಿಸಿತ್ತು. ವಿಕಿಲೀಕ್ಸ್ ನ ಸ್ಥಾಪಕ ಸಂಪಾದಕ ಜುಲಿಯನ್ ಅಸ್ಸಂಜೆ ಮೇಲೆ ಸ್ವೀಡನ್ ನಲ್ಲಿ ರೇಪ್ ಕೇಸ್ ದಾಖಲಾಗಿತ್ತು. ಆದರೆ, ಯುದ್ಧದ ಬಗ್ಗೆ ಜನರಿಗೆ ತಿಳಿಸುವ ತಮ್ಮ ಉದ್ದೇಶಕ್ಕೆ ಕಲ್ಲು ಹಾಕಲು ಬಂಡವಾಳಶಾಹಿಗಳು ಹೂಡಿದ ತಂತ್ರ ಎಂದು ಜುಲಿಯನ್ ಹೇಳಿದ್ದರು.











Click it and Unblock the Notifications