ಒಬಾಮಾ ಐಟಿಸಿಟಿ ಬೆಂಗಳೂರಿಗೆ ಬರೋಲ್ಲ

ಇತ್ತೀಚಿನ ವೀಸಾ ಶುಲ್ಕ ಹೆಚ್ಚಳಕ್ಕೆ ಬೆಂಗಳೂರಿನ ಐಟಿ ಕಂಪೆನಿಗಳಿಂದ ಭಾರಿ ಪ್ರತಿರೋಧ ಉಂಟಾಗಿರುವ ಹಿನ್ನೆಲೆಯಲ್ಲಿ ನವೆಂಬರ್ 8 ರಿಂದ 11 ರವರೆಗಿನ ಭಾರತ ಭೇಟಿ ಸಂದರ್ಭದಲ್ಲಿ ಬೆಂಗಳೂರಿಗೆ ಬರುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಲಾಗುತ್ತಿದೆ.
ಇದರ ಜೊತೆಗೆ ಬೆಂಗಳೂರು ಮೂಲದ ಇನ್ಫೋಸಿಸ್ ಕಂಪೆನಿಯನ್ನು ಗುಜರಿ ಅಂಗಡಿ ಎಂದು ಅಮೆರಿಕ ಸಂಸದರೊಬ್ಬರು ಗೇಲಿ ಮಾಡಿದ್ದು, ಒಬಾಮಾ ಕೂಡಾ ಹೊರಗುತ್ತಿಗೆಗೆ ಹಲವು ಬಾರಿ ವಿರೋಧ ವ್ಯಕ್ತಪಡಿಸಿರುವುದು ಬೆಂಗಳೂರು ಪ್ರವಾಸ ರದ್ದಿಗೆ ಕಾರಣ ಎನ್ನಲಾಗಿದೆ. ಆದರೆ, ವಿದೇಶದಿಂದ ಬರುವ ಗಣ್ಯಾತಿಗಣ್ಯರು ಬೆಂಗಳೂರಿನ ಇ ಸಿಟಿಗೆ ಕಾಲಿಡದೇ ಹೋಗುವುದು ಅಪರೂಪ.
ಆದರೆ, ಒಬಾಮಾ ಈ ಬಾರಿ ಬೆಂಗಳೂರಿನ ಬದಲಿಗೆ ಮುಂಬೈಗೆ ಹೋಗುವ ಸಾಧ್ಯತೆಯಿದೆ. 26/11 ಘಟನೆಯ ಸಂತ್ರಸ್ತರಿಗೆ ಒಬಾಮಾ ಸಾಂತ್ವನ ಹೇಳುವ ಬರಬಹುದು. ಆದರೆ, ಒಬಾಮಾ ಪ್ರವಾಸದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.












Click it and Unblock the Notifications