ನೇಪಾಳದಲ್ಲಿ ವಿಮಾನ ಅಪಘಾತ : 15 ಸಾವು
ಕಠ್ಮಂಡು,
ಆ. 24 : ಹವಾಮಾನ ವೈಪರೀತ್ಯದಿಂದಾಗಿ ವಿಮಾನವೊಂದು ಅಪಘಾತಕ್ಕೀಡಾಗಿದ್ದು, 15 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಮಕ್ವಾನಪುರ ಜಿಲ್ಲೆಯಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ. id="toptextpromo">ಕಳೆದ
ಎರಡು ದಿನಗಳಿಂದ ಕಠ್ಮಂಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಾರಿ ಮಳೆ ಸುರಿಯತೊಡಗಿದೆ. ಇದರಿಂದ ಕೆಲ ದೇಶಿಯ ವಿಮಾನಗಳ ಸೇವೆಗಳನ್ನು ರದ್ದುಗೊಳಿಸಲಾಗಿತ್ತು. ಇಂದು ಸುರಿದ ಭಾರಿ ಮಳೆಗೆ ಹವಾಮಾನದಲ್ಲಿ ವೈಪರೀತ್ಯ ಉಂಟಾಗಿದ್ದರಿಂದ ವಿಮಾನ ಅಪಘಾತಕ್ಕೆ ಈಡಾಗಿದೆ. ಮೂರು ಮಂದಿ ವಿಮಾನದ ಸಿಬ್ಬಂದಿ ಸೇರಿದಂತೆ ಒಟ್ಟು 15 ಸಾವನ್ನಪ್ಪಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹವಾಮಾನದಲ್ಲಾದ
ಏರುಪೇರಿನಿಂದ ಕಠ್ಮಂಡುದಿಂದ 80 ಕಿಮೀ ದೂರದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಡಾರ್ನೀರ್ ಕಂಪನಿಯ ವಿಮಾನ ಅಪಘಾತಕ್ಕೆ ಈಡಾಗಿದೆ. ವಿಮಾನದ ಸಿಬ್ಬಂದಿ ಸೇರಿ 15 ಮಂದಿ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.











Click it and Unblock the Notifications