ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಪಿರೈಟ್ ಸೇವೆಗೂ ಸೇವಾ ತೆರಿಗೆ: ಸರ್ಕಾರ

By Mahesh
|
Google Oneindia Kannada News

PVR Cinemas
ನವದೆಹಲಿ, ಆ.23: ಪಿವಿಆರ್ ಪಿಕ್ಚರ್ಸ್ ನ ಕಾಪಿ ರೈಟ್ ಸೇವೆಗಳ ತಾತ್ಕಾಲಿಕ ವರ್ಗಾವಣೆಗೂ ಸೇವಾ ತೆರಿಗೆ ನೀಡಬೇಕಾಗಿದೆ ಎಂದು ಕಂದಾಯ ಇಲಾಖೆ ಇಂದು ದೆಹಲಿ ಹೈ ಕೋರ್ಟಿಗೆ ತಿಳಿಸಿದೆ.

ಸರ್ಕಾರ ತೆರಿಗೆ ವಿಧಿಸಿರುವದನ್ನು ಪ್ರಶ್ನಿಸಿ ಪಿವಿಆರ್ ಹೈ ಕೋರ್ಟಿನ ಮೆಟ್ಟಿಲೇರಿತ್ತು. ಇಂದು ಸರ್ಕಾರ ಅಫಿಡವಿಟ್ ಸಲ್ಲಿಸಿ ಸಂಗೀತದ ಹಕ್ಕುಗಳು, ಚಲನ ಚಿತ್ರಗಳ ಹಕ್ಕುಗಳು ಹಾಗೂ ಡೈರೆಕ್ಟ್ ಟು ಹೋಮ್ ಸೇವೆಯ ಮಾರಾಟಕ್ಕೂ ಸೇವಾ ತೆರಿಗೆ ಭಾದ್ಯಸ್ಥವಾಗಿವೆ ಎಂದು ಹೇಳಿದೆ.

ಸೀಮಿತ ಅವಧಿಯ ಹಕ್ಕುಗಳ ತತ್ಕಾಲಿಕ ವರ್ಗಾವಣೆಗೂ ಸೇವಾ ತೆರಿಗೆ ನೀಡಬೇಕಿದೆ ಎಂದು ಸರ್ಕಾರ ವಾದಿಸಿದೆ. ಈ ಕುರಿತು ತೆರಿಗೆ ವಿಧಿಸುವದು ಕಾನೂನಿಗೆ ವಿರುದ್ದ ವಾಗಿದೆ ಎಂದು ಪಿವಿಆರ್ ವಾದಿಸಿದೆ ಕಳೆದ ಜುಲೈ ಒಂದರಂದು ಹಣಕಾಸು ಸಚಿವಾಲಯ ಕಾಪಿರೈಟ್ ಸೇವೆಗಳಿಗೆ ಸೇವಾ ತರಿಗೆ ವಿಧಿಸುವ ನಿಯಮವನ್ನು ಜಾರಿಗೊಳಿಸಿದ್ದು ರಾಜ್ಯಗಳು ವಿಧಿಸುವ ಮೌಲ್ಯಾಧಾರಿತ ತೆರಿಗೆ ಜತೆಗೆ ಈ ಶೇ 10.3 ರಷ್ಟು ಸೇವಾ ತೆರಿಗೆ ನೀಡಬೇಕಿದೆ.

ಪಿವಿಆರ್, ಬಾಲಾಜಿ ಟೆಲಿ ಫಿಲ್ಮ್ಸ್, ಯಶ್ ರಾಜ್ ಫಿಲ್ಮ್ಸ್, ಯುಟಿವಿ ಮೋಷನ್ ಪಿಕ್ಚರ್‍ಸ್ ಮತ್ತು ರಿಲಯನ್ಸ್ ಬಿಗ್ ಇದರ ವಿರುದ್ಧ ಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದು ಇದು ದ್ವಿ ತೆರಿಗೆ ಪದ್ದತಿ ಆಗಿದೆ ಎಂದು ವಾದಿಸಿವೆ. ಕೋರ್ಟು ಕಂಪೆನಿಗಳ ಪರವಾಗಿ ತೀರ್ಪು ನೀಡಿದರೆ ಸರ್ಕಾರ ಈ ವರ್ಷ ಕನಿಷ್ಠ 100 ಕೋಟಿ ರೂಪಾಯಿಗಳ ಆದಾಯವನ್ನು ಕಳೆದುಕೊಳ್ಳಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X