ಪುಷ್ಕರ್ ಜತೆ ಶಶಿ ತರೂರ್ ಅದ್ದೂರಿ ಮೂರನೆ ಮದುವೆ

Shashi Tharoor weds Sunanda Pushkar
ಪಾಲಕ್ಕಾಡ್, ಆ.22: ಕೇರಳದ ಪಾಲಕ್ಕಾಡ್ ನಲ್ಲಿ ತನ್ನ ಬಹುಕಾಲದ ಗೆಳತಿ ಸುನಂದ ಪುಷ್ಕರ್ ಅವರೊಂದಿಗೆ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ವಿವಾಹ ಇಂದು ನೆರವೇರಿತು. ತರೂರ್ ಅವರ ಪೂರ್ವಿಕರ ಮನೆಯಲ್ಲಿ ಅದ್ದೂರಿಯಾಗಿ ನಡೆದ ಈ ವಿವಾಹ ಮಹೋತ್ಸವಕ್ಕೆ ತರೂರ್, ಸುನಂದ ಬಂಧು ಮಿತ್ರರು ಆಗಮಿಸಿ ನೂತನ ದಾಂಪತ್ಯಕ್ಕೆ ಶುಭ ಹಾರೈಸಿದರು.

ಮಲ್ಲಿಗೆ ಹೂ ಮಾಲೆಯನ್ನು ಒಬ್ಬರಿಗೊಬ್ಬರು ಬದಲಾಯಿಸಿಕೊಳ್ಳುವ ಮೂಲಕ ಶಶಿ ತರೂರ್ ಮತ್ತು ಸುನಂದ ಪುಷ್ಕರ್ ನೂತನ ದಾಂಪತ್ಯಕ್ಕೆ ಅಡಿಯಿಟ್ಟರು. ಇಬರಿಬ್ಬರ ಮದುವೆ ಮಹೋತ್ಸವ ಕೇರಳದ ಸಂಪ್ರದಾಯ ಪ್ರಕಾರ ನಡೆಯಿತು. ವರಮಹಾಶಯ ಶಶಿ ತರೂರ್ ಹಾಗೂ ದುಬೈ ಮೂಲದ ವಧು ಸುನಂದಾ ಅವರಿಗೆ ಇದು ಮೂರನೇ ಮದುವೆ.

ಶ್ವೇತವಸ್ತ್ರಧಾರಿಯಾಗಿದ್ದ ವಧುವರರ ಮೂರನೆ ಮದುವೆಗೆ ಅವರ ಮಕ್ಕಳು ಶುಭ ಕೋರಿದ್ದು ವಿಶೇಷವಾಗಿತ್ತು. ಪುಷ್ಕರ್ ಅವರ ಮಗ ಹಾಗೂ ತರೂರ್ ಅವರ ಇಬ್ಬರು ಗಂಡು ಮಕ್ಕಳು ಈ ಮದುವೆಗೆ ಸಾಕ್ಷಿಯಾದರು. 200 ವರ್ಷಗಳಷ್ಟು ಹಳೆಯದಾದ ಮನೆಯಲ್ಲಿ ಭಾರತೀಯ ಸಂಪ್ರದಾಯ ರೀತ್ಯಾ ಮದುವೆ ನೆರವೇರಿತು.

ವಧು ಪುಷ್ಕರ್ ಅವರು ಈ ಹಿಂದೆ ಕಾಶ್ಮಿರಿಯೊಬ್ಬರನ್ನು ವಿವಾಹವಾಗಿದ್ದರು ಬಳಿಕ ಮಲೆಯಾಳಿ ಉದ್ಯಮಿಯೊಬ್ಬರ ಜೀವನದಲ್ಲಿ ಬಾಳಸಂಗಾತಿಯಾಗಿ ಪ್ರವೇಶಿಸಿದ್ದರು. ದುಬೈ ಮೂಲದ ವಿಮೆ ಮತ್ತು ಇನ್ವೆಸ್ಟ್ ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆತ ರಸ್ತೆ ಅಪಘಾತದಲ್ಲಿ ಸಾವಪ್ಪಿದ್ದ. ಈಗ ತರೂರ್ ಅವರನ್ನು ಮದುವೆಯಾಗುವ ಮೂಲಕ ಹೊಸ ಬಾಳಿಗೆ ಅಡಿಯಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+