ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂತಕದಲ್ಲಿ ಸಿಎಂ ಸೆಕೆಂಡ್ ಷೋ: ಎಚ್ಡಿಕೆ

By Mahesh
|
Google Oneindia Kannada News

HD Kumaraswamy
ಬೆಂಗಳೂರು, ಆ.21: ಬೆಗ್ಗರ್ಸ್ ಕಾಲೋನಿ ದುರಂತದ ಬಗ್ಗೆ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ,ಈ ಬಗ್ಗೆ ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೂತಕದ ಸಮಯದಲ್ಲಿ ಸಿನಿಮಾ ನೋಡುವ ನಿರ್ಲಜ್ಜ ಸಿಎಂ ಎಂದು ಯಡಿಯೂರಪ್ಪ ಅವರನ್ನು ಮೂದಲಿಸಿದರು.

ರಾಜ್ಯ ಸರ್ಕಾರ ಉಡಾಫೆ ರೀತಿಯಲ್ಲಿ ವರ್ತಿಸುತ್ತಿದೆ. 23 ಜನರ ಸಾವಿಗೆ ಬೆಲೆ ಇಲ್ಲವೇ. ಮುಖ್ಯಮಂತ್ರಿಗಳೇ ನೇರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಸಿಎಂಗೆ ಮನುಷ್ಯತ್ವ ಇಲ್ಲ ಮಾನವೀಯ ಮೌಲ್ಯದ ಬಗ್ಗೆ ತಿಳಿಯಲು ಅಡ್ವಾಣಿ, ಸುಷ್ಮಾ ಜೊತೆ ಸೆಕೆಂಡ್ ಷೋ ಸಿನಿಮಾ ನೋಡೋಕೆ ಹೋಗುತ್ತಾರೆ. ಸಾವಿನ ಸಮಾಧಿ ಮೇಲೆ ಸಂಭ್ರಮಾಚರಣೆ ಮಾಡುವ ನಿರ್ಲಜ್ಜರು ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಎಸ್.ಆರ್.ನಾಯಕ್ ಕಳವಳ: ನಗರದ ಮಾಗಡಿ ರಸ್ತೆಯ ಸುಮನಹಳ್ಳಿ ನಿರಾಶ್ರಿತರ ವಸತಿ ಕೇಂದ್ರದಲ್ಲಿ ಅರಾಜಕತೆ, ಭ್ರಷ್ಟಾಚಾರ, ಲೈಂಗಿಕ ದೌರ್ಜನ್ಯ ತಾಂಡವವಾಡುತ್ತಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ.ಎಸ್.ಆರ್.ನಾಯಕ್ ಕಳವಳ ವ್ಯಕ್ತಪಡಿಸಿದ್ದಾರೆ.

ಪುನರ್ವಸತಿ ಕೇಂದ್ರದ ಕೊಠಡಿಯಲ್ಲಿ ನಿಕೃಷ್ಟ ಪರಿಸ್ಥಿತಿಯಲ್ಲಿ ನಿರಾಶ್ರಿತರು ಜೀವನ ನಡೆಸುತ್ತಿದ್ದಾರೆ. ಆದರೆ, ಮಂತ್ರಿಗಳು ಹಾರಿಕೆಯ ಉತ್ತರ ನೀಡುವ ಮೂಲಕ ಜಾರಿಕೊಳ್ಳುತ್ತಿದೆ. ಇವರು ಒಂದು ದಿನ ಈ ಜಾಗದಲ್ಲಿ ವಾಸವಿದ್ದು ತೋರಿಸಲಿ ಎಂದು ನಾಯಕ್ ಸವಾಲೆಸೆದರು.

ಪುನರ್ವಸತಿ ಕೇಂದ್ರದಲ್ಲಿ ಸತ್ತವರು ಸ್ವಾಭಾವಿಕ ಅಥವಾ ಸಾಂಕ್ರಾಮಿಕ ರೋಗದಿಂದ ಎಂಬ ಸತ್ಯ ಹೊರಬರಬೇಕಾದರೆ ತನಿಖೆ ನಡೆಯಬೇಕು. ಶವಗಳ ಪರೀಕ್ಷೆ ಅನಿವಾರ್ಯ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X