ಶೌಚಗುಂಡಿ ಬೇಕೆ? 1 ಮಿಲಿಯನ್ ಡಾಲರ್ ಅಷ್ಟೆ

 US author JD Salinger’s toilet on sale for $1m
ಲಂಡನ್, ಆ.21: ಜಗದ್ವಿಖ್ಯಾತ ವ್ಯಕ್ತಿಗಳಿಂದ ಬಳಸಲ್ಪಟ್ಟ ವಸ್ತುಗಳ ಹರಾಜು ಮಾಡಲು ಅಂತರ್ಜಾಲಕ್ಕಿಂತ ಸೂಕ್ತ ತಾಣ ಬೇಕೆ? ಆನ್ ಲೈನ್ ಮೂಲಕ ಕೊಂಡು ಕೊಳ್ಳುವವರಿಗೆ ವೇದಿಕೆ ಒದಗಿಸಿರುವ ಇಬೇ ಈಗ ಅಮೆರಿಕದ ಸಾಹಿತಿ ಜೆಡಿ ಸಾಲಿಂಜರ್ ಅವರ ಶೌಚಗುಂಡಿಯನ್ನು ಮಾರಾಟಕ್ಕಿಟ್ಟಿದ್ದು, ಆನ್ ಲೈನ್ ಮೂಲಕ ಹರಾಜು ನಡೆಸುತ್ತಿದೆ.

ಇದೇನು ತಮಾಷೆಗೆ ಎಂದು ಮೂಗು ಮುರಿಯುವವರು ಅದರ ಹರಾಜು ಬೆಲೆ ಎಷ್ಟಂತ ಒಮ್ಮೆ ನೋಡಿಬಿಡಿ. ಈ ಶೌಚಗುಂಡಿ(ಕಮೋಡ್)ನ ಬೆಲೆ ಕೇವಲ 1 ಮಿಲಿಯನ್ ಡಾಲರ್! ಅಚ್ಚರಿಯಾಯಿತೆ?

ಸಾಲಿಂಜರ್ ಗೆ ಸೇರಿದ ಮನೆಯನ್ನು ಜೋನ್ ಲಿಟ್ಲಫೀಲ್ಡ್ ಎಂಬುವವರು ಕೊಂಡುಕೊಂಡಾಗ ಈ ಕಮೋಡನ್ನು ಕಿತ್ತುಹಾಕಿದ್ದರು. ಮಾರಾಟಕ್ಕೆ ಇಟ್ಟ ಕಮೋಡ್ ಅನ್ನು ಶುಚಿಗೊಳಿಸಿ, ಸಿಂಗಾರಿಸೋ ತೊಂದರೆಯನ್ನು ಇಬೇ ತೆಗೆದುಕೊಂಡಿಲ್ಲ. ದಂಪತಿಯಿಂದ ಕಮೋಡ್ ಪಡೆದಾಗ ಸ್ವಚ್ಛತೆ ಕಾಣದೆ ಯಾವ ಸ್ಥಿತಿಯಲ್ಲಿತ್ತೋ ಅದೇ ಸ್ಥಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಪ್ರಕಟಣೆ ನೀಡಿದೆ.

ನಮ್ಮ ಕನ್ನಡ ಪತ್ರಕರ್ತ ಸಾಹಿತಿ ವೈಎನ್ ಕೆ ಘ್ನಾನ ಪೀಠ ಎಂದು ಕರೆದಂತೆ , ಇಬೇ ಕೂಡಾ ಸಾಲಿಂಜರ್ ಈ ಕಮೋಡ್ ಮೇಲೆ ಕೂತು ಏನೆಲ್ಲಾ ಅದ್ಭುತ ಕಥೆಗಳನ್ನು ರಚಿಸಿರಬಹುದು? ದಿ ಕ್ಯಾಚರ್ ಇನ್ ದಿ ರೇಯಂಥ ಅದ್ಭುತ ಕಾದಂಬರಿ ಮತ್ತು ಅನೇಕ ಸಣ್ಣ ಕಥೆಗಳ ಜನಕ ಸಾಲಿಂಜರ್ ಅವರ ಕಲ್ಪನೆ ಹಾಗೂ ಆಲೋಚನೆಗಳು ರೂಪುಗೊಂಡಿದ್ದು ಈ ಪೀಠದ ಮೇಲೆಯೇ ಇರಬಹುದೆ ಎಂಬ ಪ್ರಶ್ನೆಯನ್ನು ಇಬೇ ಮುಂದಿಟ್ಟಿದೆ.

ಸಾಹಿತಿಯ ನ್ಯೂ ಹ್ಯಾಂಪ್ ಷೈರ್ ನ ಮನೆಯಲ್ಲಿದ್ದ ಈ ಕಮೋಡ್ ಗೆ ಈಗಾಗಲೇ ಬಿಡ್ಡಿಂಗ್ ಶುರುವಾಗಿದ್ದು, ಅನೇಕರು ಬಿಡ್ಡಿಂಗ್ ಸಲ್ಲಿಸಿದ್ದಾರೆ. The Catcher in the Rye ಕೃತಿ ಖ್ಯಾತಿಯ ಅಮೆರಿಕ ಮೂಲದ ಸಾಹಿತಿ ಸಾಲಿಂಜರ್ ತಮ್ಮ 91 ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿದರು. ಸೆ.4ಕ್ಕೆ ಈ ಹರಾಜು ಪ್ರಕ್ರಿಯೆ ಕೊನೆಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+