ಒಬಾಮಾ ಮುಸ್ಲಿಂ ಅಲ್ಲ ಕ್ರಿಶ್ಚಿಯನ್: ಶ್ವೇತ ಭವನ

Obama is Christian, White House affirms
ವಾಷಿಂಗ್ಟನ್, ಆ. 20: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಮುಸ್ಲಿಂ ಅಲ್ಲ, ಅಪ್ಪಟ್ಟ ಕ್ರಿಶ್ಚಿಯನ್ ಈ ಬಗ್ಗೆ ಯಾವುದೇ ಸಂದೇಹ ಬೇಡ ಎಂದು ಶ್ವೇತಭವನ ಸ್ಪಷ್ಟನೆ ನೀಡಿದೆ. ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ಒಬಾಮಾರನ್ನು ಮುಸ್ಲಿಂ ಎಂದು ನಂಬಿರುವ ಅಮೆರಿಕನ್ನರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿತ್ತು.

ಪ್ರತಿ ಐವರು ಅಮೆರಿಕನ್‌ರಲ್ಲಿ ಒಬ್ಬರು ಬರಾಕ್ ಒಬಾಮಾರನ್ನು ಮುಸ್ಲಿಮ್ ಗೆ ಜನಾಂಗಕ್ಕೆ ಸೇರಿದವರು ಎಂದು ನಂಬಿದ್ದಾರೆ. ಇದೇ ರೀತಿ ನಂಬಿರುವವರ ಸಂಖ್ಯೆಯೂ ಹೆಚ್ಚಳವಾಗಿದೆ ಎಂದು ಆ.19 ರಂದು ಪ್ಯೂ ಸಂಶೋಧನಾ ಕೇಂದ್ರ ಘೋಷಿಸಿತ್ತು.

ಅಮೆರಿಕದ ಶೇ.18ರಷ್ಟು ಜನರು ಒಬಾಮಾ ಮುಸ್ಲಿಂ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದು, 2009ರ ಮಾರ್ಚ್‌ನಲ್ಲಿ ನಡೆಸಿದ ಸಮೀಕ್ಷೆಗಿಂತ ಶೇ. 9 ರಷ್ಟು ಹೆಚ್ಚಳ ಕಂಡು ಬಂದಿದೆ. ಶೇ. 34ರಷ್ಟು ಅಮೆರಿಕನ್‌ ಪ್ರಜೆಗಳು ಒಬಾಮಾ ಕ್ರಿಶ್ಚಿಯನ್ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಆದರೆ 2009ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.48ರಷ್ಟು ಜನ ಕ್ರಿಶ್ಚಿಯನ್ ಎಂದು ತಿಳಿಸಿದ್ದರು.

ವರ್ಲ್ಡ್ ಟ್ರೆಡ್ ಸೆಂಟರ್ ಇದ್ದ ಜಾಗದಲ್ಲಿ ಸುಂದರ ಇಸ್ಲಾಮಿಕ್ ಪ್ರಾರ್ಥನಾಲಯ (ಮಸೀದಿ) ನಿರ್ಮಿಸುವ ಇಚ್ಛೆ ವ್ಯಕ್ತಪಡಿಸಿ, 26/11 ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬರಾಕ್ ಒಬಾಮಾ ನೀಡಿದ್ದ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಈ ಸಮೀಕ್ಷೆಯನ್ನು ನಡೆಸಲಾಯಿತು ಎಂದು ಸಂಸ್ಥೆ ಹೇಳಿದೆ.

ಈ ಸಮೀಕ್ಷೆ ಹೊರಬಿದ್ದ ನಂತರ ಶ್ವೇತಭವನದ ವಕ್ತಾರ ಬಿಲ್ ಬರ್ಟೋನ್ ಅವರು ಸಮಾಜಾಯಿಷಿ ನೀಡಿ, ಬರಾಕ್ ಒಬಾಮಾ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾಗಿದ್ದಾರೆ. ಅದರಲ್ಲಿ ಯಾವುದೇ ಗೊಂದಲದ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅವರು ದಿನಂಪ್ರತಿ ಪ್ರಾರ್ಥನೆ ಸಲ್ಲಿಸುತ್ತಾರೆ. ಸದ್ಯ ತಮ್ಮ ರಜಾದಿನಗಳನ್ನು ಕಳೆಯುತ್ತಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ದಟ್ಸ್ ಕನ್ನಡ ಹೂವಿನಂಗಡಿ 24/7

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+