ಇದು ಸಾಧ್ಯ: 10 ಲಕ್ಷಕ್ಕೆ ಬೆಂಗಳೂರಲ್ಲೊಂದು ಮನೆ

ಹತ್ತು ಲಕ್ಷಕ್ಕೆ ಮನೆ ಹೇಗೆ ಸಾಧ್ಯ? : ಅಮೆರಿಕದ ಕಾನ್ಸಾಸ್ ಸಿಟಿಯಿಂದ ಅಲ್ಯುಮಿನಿಯಂ ತೊಲೆಗಳನ್ನು ತರೆಸಿಕೊಂಡು, ಕಾಂಕ್ರೀಟ್ ಬಳಕೆ ಕಮ್ಮಿಮಾಡಲಾಗುವುದು. ಸುಮಾರು 10 ಲಕ್ಷ ರು. ವೆಚ್ಚದಲ್ಲಿ 1,900 ಮನೆಗಳನ್ನು ನಿರ್ಮಿಸಲಾಗುವುದು. ಕಾಸ್ಟ್ ಆನ್ ಸೈಟ್ ತಂತ್ರಜ್ಞಾನ ಹಾಗೂ ಅಲ್ಯೂಮಿನಿಯಂ ಬೀಮ್ ಗಳನ್ನು ಅಮೆರಿಕದಿಂದ ತರಲಾಗುವುದು. ಇದರಿಂದ ಪ್ರತಿ ಚದರ ಅಡಿಗೆ ತಗುಲುವ ವೆಚ್ಚದಲ್ಲಿ ಶೇ 35ರಿಂದ 40ರಷ್ಟು ಕಮ್ಮಿಯಾಗಲಿದೆ ಎನ್ನುತ್ತಾರೆ ಜಯತೀರ್ಥರಾವ್.
16.1 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ತಲೆ ಎತ್ತುತ್ತಿರುವ ಈ ಮಾದರಿ ಯೋಜನೆ Value and Budget Housing Corp.(VBHC)ನ ಪ್ರಪ್ರಥಮ ಯೋಜನೆಯಾಗಿದೆ. ಸಿಟಿ ಬ್ಯಾಂಕ್ ನ ಮಾಜಿ ಉದ್ಯೋಗಿಗಳಾದ ಜಯತೀರ್ಥರಾವ್ ಹಾಗೂ ಪಿಎಸ್ ಜಯಕುಮಾರ್ ಇದರ ರುವಾರಿಗಳಾಗಿದ್ದಾರೆ. ಜಯತೀರ್ಥರಾವ್, ಎಂಫಸೀಸ್ ಸಾಫ್ಟ್ ವೇರ್ ಕಂಪೆನಿಯ ಮಾಜಿ ಸಿಇಒ ಕೂಡಾ ಆಗಿದ್ದಾರೆ.
ಪ್ರಸಕ್ತ ಯೋಜನೆಯ ಪೂರ್ಣಗೊಂಡ ನಂತರ ಮುಂದಿನ ಹತ್ತು ವರ್ಷಗಳಲ್ಲಿ ನಗರದಾದ್ಯಂತ ಸುಮಾರು ಹತ್ತು ಲಕ್ಷ ಮನೆ ನಿರ್ಮಾಣದ ಗುರಿಯನ್ನು ವಿಬಿಎಚ್ ಸಿ ಹೊಂದಿದೆ. ವಿಬಿಎಚ್ ಸಿಯ ಯೋಜನೆಗೆ ಗೃಹ ಸಾಲದ ನೆರವು ನೀಡಲು ಎಚ್ ಡಿ ಎಫ್ ಸಿ ಮುಂದೆ ಬಂದಿದೆ. ನಗರ ಪ್ರದೇಶಗಲಲ್ಲಿ ಈ ರೀತಿಯ ಯೋಜನೆಗಳು ಇನ್ನೂ ದೊಡ್ಡ ಪ್ರಮಾಣದಲ್ಲಿ ಕಾರ್ಯಗತವಾಗಬೇಕು ಎಂದು ಎಚ್ ಡಿಎಫ್ ಸಿಯ ಗೃಹ ನಿರ್ಮಾಣ ವಿಭಾಗದ ಮುಖ್ಯಸ್ಥ ದೀಪಕ್ ಪರೇಖ್ ಹೇಳುತ್ತಾರೆ.
ವೈಭವ ಯೋಜನೆ ಕಾರ್ಯಗತವಾಗುವ ಮೊದಲೇ ಈ ಯೋಜನಾ ಸ್ಥಳಕ್ಕೆ ಸಮೀಪದಲ್ಲಿ ಜನಾಗ್ರಹ ಖ್ಯಾತಿಯ ರಮೇಶ್ ರಾಮನಾಥನ್ ಅವರು ಇದೇ ರೀತಿಯಲ್ಲಿ 'ಜಾನಾಧಾರ್ ಸುಭ' ಎಂಬ ಹೆಸರಿನಲ್ಲಿ ಮಾದರಿ ಗೃಹ ನಿರ್ಮಾಣ ಕಾರ್ಯಕ್ಕೆ ಕಳೆದ ಏಪ್ರಿಲ್ ನಲ್ಲಿ ಚಾಲನೆ ನೀಡಿದ್ದರು. ಜಾನಾಧಾರ್ ಕನ್ಸ್ ಸ್ಟಕ್ಷನ್ ಪ್ರೈ.ಲಿ ಸಂಸ್ಥೆ ಮೂಲಕ ಮೊದಲ ಹಂತದಲ್ಲಿ 5 ಲಕ್ಷ ವೆಚ್ಚದಲ್ಲಿ 528 ಮನೆಗಳನ್ನು ನಿರ್ಮಿಸಲು ರಮೇಶ್ ಯೋಜನೆ ಹಾಕಿಕೊಂಡಿದ್ದಾರೆ. ರಮೇಶ್ ಕೂಡಾ ಸಿಟಿ ಬ್ಯಾಂಕ್ ನ ಮಾಜಿ ಉದ್ಯೋಗಿ ಎಂಬುದು ವಿಶೇಷ.
ಬೆಂಗಳೂರು ಅಲ್ಲದೆ, ಚೆನ್ನೈ, ಹೈದರಾಬಾದ್, ಬಿವಾಡಿಯಲ್ಲಿ ವಸತಿ ನಿವೇಶನ ಭೂಮಿಯನ್ನು ವಿಬಿಎಚ್ ಸಿ ಖರೀದಿಸಿದೆ. ಪುಣೆ, ನಾಸಿಕ್ ಹಾಗೂ ನವಿ ಮುಂಬೈನಲ್ಲೂ ತನ್ನ ಯೋಜನೆ ವಿಸ್ತರಿಸಲು ಇಚ್ಛಿಸಿದೆ. ವೈಭವದಲ್ಲಿ ಫ್ಲ್ಯಾಟ್ ಬೆಲೆ 4.5 ರಿಂದ 10 ಲಕ್ಷ ರು. ಇರುತ್ತದೆ. ಸ್ಟುಡಿಯೋ, 1.ಬೆ.ರೂಂ ಹಾಗೂ 2 ಬೆ. ರೂಂ ಮಾದರಿಯಲ್ಲಿ ಸಿಗಲಿದೆ.
ಮಾಸಿಕ 10 ಸಾವಿರದಿಂದ 30 ಸಾವಿರ ರು. ಸಂಬಳ ಪಡೆವ ಜನರೇ ನಮ್ಮ ಮುಖ್ಯ ಗುರಿ. ಫ್ಲ್ಯಾಟ್ ಗಳ ಬೆಲೆಗಳನ್ನು ಮುಂಬರುವ 24-36 ತಿಂಗಳೊಳಗೆ ಅಂತಿಮಗೊಳಿಸಲಾಗುವುದು ಎಂದು ಜೆರ್ರಿ ರಾವ್ ಹೇಳಿದರು.
ವೈಭವ ಯೋಜನೆ ಘೋಷಣೆಗೊಂಡ ಬೆನ್ನಲ್ಲೇ ಸುಮಾರು 100 ಜನ ಬುಕ್ ಮಾಡಿದ್ದಾರೆ. ವರ್ಷದೊಳಗೆ ಖರೀದಿದಾರರಿಗೆ ಮನೆ ಕೀ ಒಪ್ಪಿಸಲಾಗುವುದು. ಗೃಹಸಾಲ ನೀಡುವ ಬಗ್ಗೆ ಎಚ್ ಡಿ ಎಫ್ ಸಿ ಜೊತೆ ಮಾತುಕತೆ ನಡೆದಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಕುಮಾರ್ ತಿಳಿಸಿದರು.
ಜೆರ್ರಿ ರಾವ್ ವೈಭವ ಯೋಜನೆ ಸುದ್ದಿಗೋಷ್ಠಿಯ ಪ್ರಮುಖಾಂಶಗಳು:
* ಅನೇಕಲ್ ಬಳಿ ವೈಭವ ಗೃಹ ನಿರ್ಮಾಣ ಯೋಜನೆಗೆ ಕಾರ್ಯಾರಂಭ.
* ಯೋಜನಾ ಸ್ಥಳ ಎಲೆಕ್ಟ್ರಾನಿಕ್ ಸಿಟಿಯಿಂದ ಸುಮಾರು 11 ಕಿ.ಮೀ. ದೂರವಿದೆ.
* ಪ್ರತಿ ಮನೆಗಳ(ಫ್ಲ್ಯಾಟ್) ಗಳ ವೆಚ್ಚ 4 ರಿಂದ 10 ಲಕ್ಷ ರುಗಳು ಮಾತ್ರ.
* ಸಿಮೆಂಟ್ ಕಾಂಕ್ರೀಟ್ ಬಳಕೆ ಕಮ್ಮಿ ಮಾಡಿ, ಅಲ್ಯೂಮಿನಿಯಂ ಬೀಮ್, ಕಾಸ್ಟ್ ಆನ್ ಸೈಟ್ ತಂತ್ರಜ್ಞಾನ ಉಪಯೋಗಿಸಲಾಗುವುದು.
* ಮೂರು ಮಾದರಿಯಲ್ಲಿ ಲಭ್ಯ ಸ್ಟುಡಿಯೋ(354 ಚ.ಅ), 1BHK (ಬೆಡ್ ರೂಂ ,ಹಾಲ್, ಅಡುಗೆಮನೆ, 456 ಚ.ಅ ಇಂದ 476 ಚ.ಅ) ಹಾಗೂ 2BHK( 620 ಇಂದ 640 ಚ.ಅ ವಿಸ್ತೀರ್ಣ)
* ಜೆರ್ರಿ ರಾವ್ ಆರಂಭಿಸಿರುವ ಈ VBHC ಯೋಜನೆಯಲ್ಲಿ ಸುನಿಲ್ ನಾರಾಯಣ್ ಎಂಬುವರು ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ನಿಭಾಯಿಸುತ್ತಿದ್ದಾರೆ. ಸಂಸ್ಥೆಯಲ್ಲಿ ಇವರ ಪಾಲು ಶೇ. 55. ಗೃಹಸಾಲ ನೀಡುವ ಎಚ್ ಡಿಎಫ್ ಸಿ ಪಾಲು ಶೇ.10. ಮಿಕ್ಕಿದ್ದು ವಿಬಿಎಚ್ ಸಿ ಯ ವ್ಯಕ್ತಿಗತ ಪಾಲುಗಳಾಗಿವೆ.
* ಮೊದಲ ಹಂತದಲ್ಲಿ 400 ಮನೆ ನಿರ್ಮಾಣ. ಮುಂದಿನ ಅಗಸ್ಟ್ -ಸೆಪ್ಟೆಂಬರ್ ವೇಳೆಗೆ ಪೂರ್ಣ.
* ವೈಭವ ಹೋಂ ಟೌನ್ ಬಳಿ ಸಿಬಿಎಸ್ ಸಿ ಶಾಲೆ ಹಾಗೂ ಉದ್ಯೋಗ ನಿರತ ಮಹಿಳೆಯರ ಶಿಶುಪಾಲನ ಕೇಂದ್ರ ಕೂಡಾ ಆರಂಭಿಸುವ ಯೋಜನೆಯಿದೆ.












Click it and Unblock the Notifications