ಪ್ರಿಯಾಂಕಾ ಕೊಲೆ : ಇನ್ಫಿ ಉದ್ಯೋಗಿಯ ವಿಚಾರಣೆ

Satishkumar Gupta
ಬೆಂಗಳೂರು, ಆ. 19 : ಡೆಲ್ಲಿ ಪಬ್ಲಿಕ್ ಸ್ಕೂಲ್ ಶಿಕ್ಷಕಿ ಪ್ರಿಯಾಂಕಾ ಕೊಲೆ ಪ್ರಕರಣದ ಆರೋಪಿ ಸತೀಶ್ ಗುಪ್ತಾನ ಗೆಳತಿ ಎನ್ನಲಾದ ಇನ್ಫೋಸಿಸ್ ನ ಉದ್ಯೋಗಿಯನ್ನು ಹುಳಿಮಾವು ಪೊಲೀಸರು ಬುಧವಾರ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಇನ್ಫೋಸಿಸ್ ನಲ್ಲಿ ಕೆಲಸ ಮಾಡುತ್ತಿರುವ ಆಕೆಯ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆದರೆ, ಬುಧವಾರ ಪೊಲೀಸರು ನಡೆಸಿದ ವಿಚಾರಣೆಗೆ ಇನ್ಫಿಯ ಮಹಿಳಾ ಉದ್ಯೋಗಿ ಸಂಪೂರ್ಣ ಸಹಕಾರ ನೀಡಿದ್ದಾರೆ.

ನಾನು ಇನ್ಫೋಸಿಸ್ ನಲ್ಲಿ ಕೆಲಸ ಮಾಡುತ್ತಿರುವುದು ನಿಜ. ಸತೀಶ್ ಗುಪ್ತಾ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ನಾನು ಬೇರೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವೆ. ಉತ್ತಮ ಸ್ನೇಹಿತರಾಗಿದ್ದ ನಾವು ಒಂದೇ ಕಂಪನಿಯಲ್ಲಿ ಮಾತನಾಡುತ್ತಿದ್ದೇವೆ. ಇದಕ್ಕೆ ಹೊರತಾಗಿ ನಮ್ಮಿಬ್ಬರ ಮಧ್ಯೆ ಯಾವುದೇ ಸಂಬಂಧವಿಲ್ಲ ಎಂದು ಆಕೆ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

ಪ್ರಿಯಾಂಕಾ ಕೊಲೆಗೂ ಮುನ್ನ ಸತೀಶ್ ಗುಪ್ತಾನಿಗೆ ಎರಡು ಮೇಲ್ ಮತ್ತು ಮೊಬೈಲ್ ನಿಂದ ಮೇಸೆಜ್ ಗಳು ಬಂದಿದ್ದವು. ಸತೀಶ್ ನ ಗೆಳತಿ ಎನ್ನಲಾದ ಇನ್ಫೋಸಿಸ್ ಉದ್ಯೋಗಿ ಕೂಡಾ ಕೊಲೆಯಲ್ಲಿ ಭಾಗಿಯಾಗಿದ್ದಾಳೆಂಬ ಅನುಮಾನದಿಂದಾಗಿ ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಸತೀಶನಿಗೆ ಅನೈತಿಕ ಸಂಬಂಧವಿತ್ತು. ಹೀಗಾಗಿ, ಪತ್ನಿ ಪ್ರಿಯಾಂಕಾಳನ್ನು ಕೊಲೆ ಮಾಡಲು ಮುಂದಾದ ಎನ್ನುವ ಅಂಶ ಸೇರಿದಂತೆ ನಾನಾ ಉಪಾಪೋಹಗಳು ಕೊಲೆ ಸುತ್ತ ಗಿರಕಿ ಹೊಡೆದಿದ್ದವು. ಆ.11ರಂದು ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ವೆಂಕಟೇಶ್ವರ ಲೇಔಟ್ ನಲ್ಲಿ ನಸುಕಿನ ಜಾವ ಕೊಲೆ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+