ದೇಶದ ಅತ್ಯುತ್ತಮ ಸಿಎಂ ಮೋದಿ: ಸಮೀಕ್ಷೆ

ಅತ್ಯುತ್ತಮ ಸಿಎಂ ಎಂಬ ಪಟ್ಟಕ್ಕೇರಿ ಹ್ಯಾಟ್ರಿಕ್ ಸಾಧನೆ ಮಾಡಿದ್ದ ಮೋದಿಗೆ ಈ ಬಾರಿ ದೆಹಲಿ ಸಿಎಂ ಶೀಲಾರಿಂದ ಉತ್ತಮ ಪ್ರತಿಸ್ಪರ್ಧೆ ಇತ್ತು. ಆದರೂ, ಜನತೆಗೆ ಮೋದಿಯ ಮೇಲೆ ಭರವಸೆ ಕುಗ್ಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸೋನಿಯಾ, ರಾಹುಲ್ ಬಿಟ್ಟರೆ ಮೋದಿ ಅತ್ಯಂತ ಜನಪ್ರಿಯ ವ್ಯಕ್ತಿ ಎಂದು ಅಲಿಖಿತ ಸುದ್ದಿ ಎಲ್ಲೆಡೆ ಹಬ್ಬಿದೆ.
ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಈ ಬಾರಿ ಮೊದಲ ಸ್ಥಾನಕ್ಕೇರುತ್ತಾರೆ ಎಂಬ ನಿರೀಕ್ಷೆಯಿತ್ತು. ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಮೂರನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. 1980ರಿಂದ ಸಾರ್ವಜನಿಕರ ಅಭಿಮತವನ್ನು ಪಡೆಯಲು ಇಂಡಿಯಾ ಟುಡೇ ಪ್ರತಿ ವರ್ಷ ಸಮೀಕ್ಷೆ ನಡೆಸುತ್ತಾ ಬಂದಿದೆ.
ದೇಶದಾದ್ಯಂತ ಜನ ಸಾಮಾನ್ಯರಿಗೆ ತಮ್ಮ ರಾಜ್ಯದ ಮುಖ್ಯಮಂತ್ರಿ ಹಾಗೂ ಇತರೆ ರಾಜ್ಯಗಳ ಮುಖ್ಯಮಂತ್ರಿಗಳ ಸಾಧನೆಯ ಮೌಲ್ಯಮಾಪನ ಮಾಡುವ ಅವಕಾಶ ಕಲ್ಪಿಸಲಾಗುತ್ತದೆ. ಗುಜರಾತ್ ನ ಶೇ.89ರಷ್ಟು ಮಂದಿ, ನರೇಂದ್ರ ಮೋದಿ ಪರವಾಗಿ ಮತ ಚಲಾಯಿಸಿದ್ದಾರೆ. ಇದರಲ್ಲಿ ಅಚ್ಚರಿ ಪಡುವಂಥದ್ದೇನಿಲ್ಲ. ಆದರೆ, ಇತರೆ ರಾಜ್ಯದ ಜನರ ಕಣ್ಣಿಗೂ ಮೋದಿ, ಆದರ್ಶ ಹಾಗೂ ಅತ್ಯುತ್ತಮ ಮುಖ್ಯಮಂತ್ರಿಯಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.












Click it and Unblock the Notifications