5 ವರ್ಷಗಳಲ್ಲಿ ಉದ್ಯೋಗಾವಕಾಶ ದ್ವಿಗುಣ

ಉದ್ಯೋಗ ನೇಮಕಾತಿ ವಾರ್ಷಿಕ ಶೇ.20 ರ ದರದಲ್ಲಿ ಬೆಳವಣಿಗೆ ದಾಖಲಿಸಲಿದ್ದು, ಈಗಿನ 1000 ಕೋಟಿ ರೂಪಾಯಿಗಳಿಂದ ಮುಂದಿನ 5 ವರ್ಷಗಳಿಗೆ 2000 ಕೋಟಿ ರೂಪಾಯಿಗಳ ಬೆಳವಣಿಗೆ ದಾಖಲಿಸಲಿದೆ ಎಂದು ಈಸೋರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ನಿತಿನ್ ದೇವೇಶ್ವರ್ ಹೇಳುತ್ತಾರೆ.
ಈ ಸೋರ್ಸ್ ಕಂಪೆನಿ ದೇಶದ ಪ್ರಮುಖ ಆನ್ ಲೈನ್ ನೌಕರಿ ಸೇವೆ ಒದಗಿಸುತ್ತಿರುವ ಈ ಎಸ್ಎಮ್ಐ ನ ಅಂಗ ಕಂಪೆನಿ ಆಗಿದೆ. ಉತ್ಪಾದನಾ ರಂಗ ವಾರ್ಷಿಕ ಶೇ.8 ರಿಂದ 10 ರಷ್ಟು ಬೆಳವಣಿಗೆ ದಾಖಲಿಸುತ್ತಿದ್ದು 0.5 ಮಿಲಿಯ ಉದ್ಯೋಗಾವಕಾಶಗಳನ್ನು ಒದಗಿಸಲಿದೆ ಎನ್ನಲಾಗಿದೆ. ಸಣ್ಣ ನಗರಗಳಿಗೆ ವರ್ಗಾವಣೆಗೊಂಡಿರುವ ಕೈಗಾರಿಕಾ ಚಟುವಟಿಕೆಗಳಿಂದ ಈ ಬೆಳವಣಿಗೆ ಆಗಲಿದೆ ಎನ್ನಲಾಗಿದೆ.
ಗುಜರಾತ್ ನ ಸಣ್ಣ ನಗರಗಳಾದ ವಾಪಿ, ಅಂಜರ್, ಚತ್ತೀಸ್ ಘಡದ ರಾಯ್ ಪುರ, ಬಿಲಾಸ್ ಪುರ, ಮತ್ತು ಕೊರ್ಬ, ಉತ್ತರ ಖಾಂಡ್ ನ ಹರಿದ್ವಾರ್ ಮತ್ತು ರುದ್ರಾಪುರ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸಿವೆ ಎಂದು ದೇವೇಶ್ವರ್ ಹೇಳಿದರು.
ಸಾರ್ವಜನಿಕ ರಂಗದ ಬ್ಯಾಂಕುಗಳೂ ಗ್ರಾಮೀಣ ಪ್ರದೇಶದೆಡೆಗೆ ಹೆಚ್ಚಿನ ಚಿತ್ತ ಹರಿಸಿರುವುದರಿಂದ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ಅವರು ಹೇಳಿದರು. ದೇಶದ ಮೊದಲ ಖಾಸಗಿ ಉದ್ಯೋಗ ವಿನಿಮಯ ಕೇಂದ್ರವನ್ನು ಪ್ರಾರಂಭಿಸಿದ ಈ ಸೋರ್ಸ್, 35 ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಿವಿಧೆಡೆಗಳಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳನ್ನು ತೆರೆಯಲಿದೆ ಎಂದು ದೇವೇಶ್ವರ್ ಹೇಳಿದರು.
ದೇಶದಲ್ಲಿ ಪ್ರತೀ ವರ್ಷ 40 ಮಿಲಿಯನ್ ಉದ್ಯೋಗಾವಕಾಶಗಳು ಲಭಿಸುತ್ತಿದ್ದು ಮುಂದಿನ 10 ವರ್ಷಗಳಲ್ಲಿ ಈ ಸಂಖ್ಯೆ 160 ಮಿಲಿಯನ್ ಗಳಿಗೇರಲಿದೆ ಎಂದು ಅವರು ಹೇಳಿದರು.












Click it and Unblock the Notifications