ಶುಕ್ರವಾರ, 13 : ಹಿಂದೂಗಳಿಗೆ ಶುಭ, ಪಾಶ್ಚಾತ್ಯರಿಗೆ ಅಶುಭ

ಶುಕ್ರವಾರವೆಂದರೆ ಹಿಂದೂಗಳಿಗೆ ಅತ್ಯಂತ ಶುಭಕರವಾದ ದಿನ. ಶ್ರಾವಣದ ಪ್ರಥಮ ಶುಕ್ರವಾರವಂತೂ ಹೆಂಗಳೆಯರಿಗಂತೂ ಮಹಾ ಸಂಭ್ರಮದ ದಿನ. ಆಷಾಢ ಮಾಸ ಹೊರತುಪಡಿಸಿದರೆ ಯಾವುದೇ ಶುಕ್ರವಾರ ಎಂಥದೇ ಕಾರ್ಯ ಪ್ರಾರಂಭಿಸಲು ಶುಭಪ್ರದವಾದ ದಿನವೆಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಎಲ್ಲ ಚಿತ್ರಗಳು ಬಿಡುಗಡೆಯಾಗುವುದು ಶುಕ್ರವಾರದಂದು. ಶುಕ್ರವಾರದಂದು ಲಕ್ಷ್ಮಿದೇವಿಗೆ ವಿಶೇಷವಾದ ಪೂಜೆ ಸಲ್ಲಿಸಲಾಗುತ್ತದೆ. ಇಂದು ಶುಕ್ರವಾರ ಶುಭವ ತರುವವಾರ ಸುಮಂಗಲಿಯರೆಲ್ಲ ನಿನ್ನ ಪೂಜಿಸುವ ಪುಣ್ಯವಾರ ಎಂದು ಲಕ್ಷ್ಮಿದೇವಿಯನ್ನು ಪರಿಪರಿಯಾಗಿ ಕೊಂಡಾಡುತ್ತಾರೆ.

13ನೇ ತಾರೀಖು ಬಂದಿರುವ ಶುಕ್ರವಾರವನ್ನೇ ಹೆಚ್ಚು ಒತ್ತಿ ಯಾಕೆ ಹೇಳಲಾಗುತ್ತಿದೆಯೆಂದರೆ, ಪಾಶ್ಚಾತ್ಯರಲ್ಲಿ ತಿಂಗಳ ಹದಿಮೂರನೇ ತಾರೀಖಿನಂದು ಬರುವ ಶುಕ್ರವಾರ ಶುಭ ಶುಕ್ರವಾರ ಅಲ್ಲವೇ ಅಲ್ಲ. ಇಂದಿನ ದಿನ ಪಾಶ್ಚಾತ್ಯರಿಗೆ ಅತ್ಯಂತ ಕರಾಳ ದಿನ, ಅಶುಭ ದಿನ, ದುರಾದೃಷ್ಟ ತರುವಂಥ ದಿನ. ಕೆಲ ಕಡೆಗಳಲ್ಲಿ ಶುಕ್ರವಾರವನ್ನೇ ಅತ್ಯಂತ ಅಶುಭಕರವೆಂದು ಪರಿಗಣಿಸಲಾಗುತ್ತದೆ.

ತಿಂಗಳ ಹದಿಮೂರನೇ ದಿನ ಶುಕ್ರವಾರ ಬಂದರೆ ಸಾವು ಸಂಭವಿಸುತ್ತದೆ, ಅಪಘಾತಗಳಾಗುತ್ತವೆ, ವ್ಯಾಪಾರದಲ್ಲಿ ನಷ್ಟ ಸಂಭವಿಸುತ್ತದೆ ಎಂಬೆಲ್ಲ ಮೂಢನಂಬಿಕೆಗಳು ಮನೆಮಾಡಿವೆ. 13ನೇ ತಾರೀಖಿನಂದು ಅತ್ಯಂತ ದುಗುಡದಿಂದ, ಅತ್ಯಂತ ಎಚ್ಚರಿಕೆಯಿಂದ ದೂಡುತ್ತಾರೆ. ಇಲ್ಲಿ ಮಂಗಳವಾರ ಯಾವುದೇ ಶುಭ ಕಾರ್ಯ ಕೈಗೊಳ್ಳದಿರುವಂತೆ ಪಾಶ್ಚಾತ್ಯರು ಶುಕ್ರವಾರ ಯಾವುದೇ ಉತ್ತಮ ಕಾರ್ಯಕ್ಕೆ ಕೈಹಾಕುವುದಿಲ್ಲ. ಒಟ್ಟೊಟ್ಟಾಗಿ 13 ಜನ ಎಲ್ಲೂ ಹೋಗುವುದಿಲ್ಲ.

/news/2010/08/13/friday-the-13th-unlucky-in-western-countries.html

ಇದಕ್ಕೆ ಕಾರಣಗಳೂ ಹಲವಾರಿವೆ. ಜೀಸಸ್ ಕ್ರಿಸ್ತ ಶುಕ್ರವಾರದಂದೇ ಶಿಲುಬೇಗೇರಿದ್ದು ಒಂದಾದರೆ, ಸಂಖ್ಯಾಶಾಸ್ತ್ರದ ಪ್ರಕಾರ 12 ಪರಿಪೂರ್ಣ ಸಂಖ್ಯೆಯಾಗಿದ್ದು, ಅದರ ನಂತರ ಬರುವ ಸಂಖ್ಯೆ 13 ಪರಿಪೂರ್ಣತೆಗೆ ಅಡ್ಡಗಾಲು ಹಾಕುತ್ತದೆ ಎಂಬುದು. ವರ್ಷದಲ್ಲಿ 12 ತಿಂಗಳು, 12 ರಾಶಿಗಳು, 12 ಗಂಟೆಗಳು, 12 ದೇವತೆಗಳು... ಇವೆಲ್ಲ ಪರಿಪೂರ್ಣತೆಯ ಸಂಕೇತಾದರೆ, 13 ಅಪರಿಪೂರ್ಣತೆಯ ಸಂಕೇತ.

ಈ ಮೂಢನಂಬಿಕೆಯ ಇತಿಹಾಸ ಸಾಕಷ್ಟು ಹಳೆಯದಾದರೂ 20ನೇ ಶತಮಾನದ ಆದಿಯವರೆಗೆ ಇದರ ಬಗ್ಗೆ ಜನ ಜಾಸ್ತಿ ತಲೆ ಕೆಡಿಸಿಕೊಂಡಿರಲಿಲ್ಲ. 20ನೇ ಶತಮಾನದಿಂದೀಚೆಗೆ ಈ ಅಶುಭ ದಿನದ ಕುರಿತು ಜನ ಮೂಢನಂಬಿಕೆಯ ದಾಸರಾಗಿದ್ದಾರೆ. ಒಂದು ಅಂದಾಜಿನ ಪ್ರಕಾರ, ಅಮೆರಿಕಾವೊಂದರಲ್ಲೇ ಸುಮಾರು 2 ಕೋಟಿಗೂ ಹೆಚ್ಚು ಜನ ಈ ಮೂಢನಂಬಿಕೆಯಿಂದ ಬಳಲುತ್ತಿದ್ದಾರೆ. ಹೊಸ ವ್ಯಾಪಾರಕ್ಕೆ ಕೈ ಹಾಕುವುದಿಲ್ಲ, ವಿಮಾನ ಹತ್ತುವುದಿಲ್ಲ, ಕೆಲವರಂತೂ ಹಾಸಿಗೆ ಬಿಟ್ಟು ಮೇಲೇಳುವುದೇ ಇಲ್ಲ!

ಮಕ್ಕಳೆಲ್ಲ ಥರ್ಟೀನಿಗೆ ಕಾಲಿಟ್ಟ ತಕ್ಷಣ ಕುಣಿದಾಡಿಬಿಟ್ಟರೆ, ದೊಡ್ಡವರೆಲ್ಲ ಥರ್ಟೀನ್ ಎಂದಾಕ್ಷಣ ಹೌಹಾರುತ್ತಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+