ಎಲ್ಲರಿಗೂ ಪಡಿತರ ಸ್ವತಂತ್ರ ದಿನದ ಕೊಡುಗೆ

ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವವರ ಜೊತೆಗೆ ಯಾವುದೇ ಕಾರ್ಡ್ ಇರದ ಜನ ಸಾಮಾನ್ಯರಿಗೂ ಆಹಾರ ಧ್ಯಾನ ಲಭ್ಯವಾಗಲಿದೆ ಎಂದು ಸಾರಿಗೆ ಸಚಿವ ಅರ್ ಅಶೋಕ್ ಸುದ್ದಿಗಾರರಿಗೆ ತಿಳಿಸಿದರು.
ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರು 6 ತಿಂಗಳಿಗೊಮ್ಮೆ 50 ಕೆಜಿ ಅಕ್ಕಿ ಹಾಗೂ ಗೋಧಿಯನ್ನು ನೇರವಾಗಿ ಆಹಾರ ನಿಗಮದ ಉಗ್ರಾಣಗಳಿಂದ ಪಡೆಯಬಹುದಾಗಿದೆ. 13 ರು ಗೆ ಒಂದು ಕೆಜಿ ಅಕ್ಕಿಯಂತೆ 50 ಕೆಜಿ ಅಕ್ಕಿ ಹಾಗೂ ಪ್ರತಿ ಕೆಜಿಗೆ 9.50 ರೂ ನಂತೆ 50 ಕೆಜಿ ಗೋಧಿಯನ್ನು ಪಡೆಯಬಹುದು .ಎಪಿಲ್ ಕಾರ್ಡ್ ದಾರರು ಪ್ರತಿ ಕೆಜಿ ಅಕ್ಕಿಗೆ 9.40 ರು (10 ಕೆಜಿ ಗರಿಷ್ಠ), ಪ್ರತಿ ಕೆಜಿ ಗೋಧಿಗೆ 7.20ರು (4 ಕೆಜಿ ಗರಿಷ್ಠ) ಎಂದು ಅಶೋಕ್ ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರರು, ಕ್ರೀಡಾಪಟುಗಳು, ಕಲಾವಿದರು, ಅಂಗವಿಕಲರು, ಖಾಸಗಿ ಸಂಸ್ಥೆಗಳ ನೌಕರರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರು, ಸಾರ್ವಜನಿಕ ಉದ್ದಿಮೆಗಳ ಸಿಬ್ಬಂದಿಗಳು ಯಾವುದೇ ಗುರುತಿನ ಚೀಟಿ ತೋರಿಸಿ ಆಹಾರ ಧಾನ್ಯ ಪಡೆಯಬಹುದು.












Click it and Unblock the Notifications