ಡಿಸೆಂಬರ್ ನಿಂದ ಜಾತಿ ಜನಗಣತಿ
ನವದೆಹಲಿ,
ಆ. 12 : ದೇಶಾದ್ಯಂತ ಡಿಸೆಂಬರ್ ನಿಂದ ಜಾತಿ ಆಧಾರಿತ ಜನಗಣತಿ ಆರಂಭಿಸಲು ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ. ಹಣಕಾಸು ಸಚಿವ ಪ್ರಣಬ್ ಮುಖರ್ಜಿ ನೇತೃತ್ವದ ಸಚಿವರ ಸಮಿತಿ ಈ ನಿರ್ಧಾರ ಕೈಗೊಂಡಿದೆ. id="toptextpromo">ಇದಕ್ಕೂ
ಮುನ್ನ ಈ ವಿಷಯದ ಕುರಿತು ವಿವಿಧ ರಾಜಕೀಯ ಪಕ್ಷಗಳು ಈ ಹಿಂದೆ ಮಂಡಿಸಿದ್ದ ವಿಚಾರಗಳನ್ನು ಸುದೀರ್ಘವಾಗಿ ಚರ್ಚಿಸಲಾಯಿತು. ಕೊನೆಗೆ ಜನಗಣತಿ ನಡೆಸಲು ಅನುಮತಿ ನೀಡಬಹುದೆಂಬ ನಿರ್ಧಾರಕ್ಕೆ ಬರಲಾಯಿತು. ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾದಳ, ಸಂಯುಕ್ತ ಜನತಾದಳ, ಮತ್ತಿತರ ಕೆಲವು ಪ್ರಮುಖ ರಾಜಕೀಯ ಪಕ್ಷಗಳು ಜನಗಣತಿ ನಡೆಸುವಂತೆ ಸರಕಾರಕ್ಕೆ ಆಗ್ರಹಿಸಿದ್ದವು. ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಕೂಡ ಜಾತಿ ಆಧಾರಿತ ಜನಗಣತಿಯ ಪರವಾಗಿ ತನ್ನ ವಾದ ಮಂಡಿಸಿತ್ತು. id='are-slot-1' class='oiad oi-axt oiadv'> id='top-searched-articles'>ರಾಷ್ಟ್ರೀಯ
ಜನಸಂಖ್ಯಾ ನೋಂದಣಿ ಪ್ರಕ್ರಿಯೆಯಲ್ಲಿ ಡಿಸೆಂಬರ್ ನಲ್ಲಿ ಆರಂಭವಾಗುವ ಬಯೋಮೆಟ್ರಿಕ್ ಹಂತದಲ್ಲಿ ಜಾತಿ ಜನಗಣತಿ ಸೇರ್ಪಡೆಗೊಳಿಸಲಾಗುತ್ತದೆ. 2011 ರ ಫೆಬ್ರವರಿಯಲ್ಲಿ ಜಾತಿಜನಗಣತಿ ಆರಂಭವಾಗಲಿದೆ. ಏಪ್ರಿಲ್ 1 ರಿಂದಲೇ ಜಾತಿ ಜನಗಣತಿ ಆರಂಭಿಸಬೇಕು ಎಂದು ಎಸ್ಪಿ, ಜೆಡಿಯು ಒತ್ತಾಯಿಸಿದ್ದವು.











Click it and Unblock the Notifications