ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೀತಿಸಿದ ತಪ್ಪಿಗೆ ಬೆತ್ತಲೆ ನಡಿಗೆ ಶಿಕ್ಷೆ ಪಡೆದ ಯುವತಿ

By Mahesh
|
Google Oneindia Kannada News

Adivasi teen paraded naked, was molested, West Bengal
ಕೋಲ್ಕತಾ, ಆ.11: ಮೇಲು ಜಾತಿಯು ಯುವಕನನ್ನು ಪ್ರೀತಿಸಿದ ಬುಡಕಟ್ಟುಜನಾಂಗ(ಆದಿವಾಸಿ)ದ ಯುವತಿಯನ್ನು 10 ಕಿ.ಮೀಟರ್ ವರೆಗೆ ಬೆತ್ತಲೆ ಮೆರವಣಿಗೆನಡೆಸಿ, ಲೈಂಗಿಕ ಕಿರುಕುಳ ನೀಡಿದ ಹೃದಯ ವಿದ್ರಾವಕ ಘಟನೆ ಕೋಲ್ಕತಾದ ಬುಡಕಟ್ಟು ಪ್ರದೇಶವೊಂದರಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಬಿಹಾರ ಹಾಗೂ ಜಾರ್ಖಂಡ್‌ನ ಗಡಿ ಪ್ರದೇಶದಲ್ಲಿರುವ ಗ್ರಾಮವೊಂದರಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಇದೀಗ ಆರೋಪಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ಮುಂದುವರೆಸಿದ್ದಾರೆ.

ಘಟನೆ ಹಿನ್ನಲೆ: ನಾಲ್ಕು ತಿಂಗಳ ಹಿಂದೆ ಮೇಲ್ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ 17 ವರ್ಷದ ಆದಿವಾಸಿ ಯುವತಿಯನ್ನು ಸ್ಥಳೀಯರ ತಂಡ ಹಿಡಿದು ಬೆತ್ತಲೆಗೊಳಿಸಿತ್ತು. ನಂತರ 10 ಕಿ.ಮೀ. ದೂರದವರೆಗೆ ಬೆತ್ತಲೆ ಮೆರವಣಿಗೆ ನಡೆಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಕೂಡ ನಡೆಸಲಾಗಿತ್ತು. ಇದನ್ನು ಸ್ಥಳೀಯ ಪಂಚಾಯಿತಿ, ಮಾಧ್ಯಮಗಳಿಗೆ ತಿಳಿಸಿದ ನಂತರ ಈ ದುರ್ಘಟನೆ ವಿವರ ಬಯಲಾಗಿದೆ.

ಈ ದುಷ್ಕೃತ್ಯದ ನಂತರ ತೃಪ್ತರಾಗದ ಪಾತಕಿಗಳು, ಯುವತಿಯ ಬೆತ್ತೆಲೆ ಚಿತ್ರವನ್ನು ಮೊಬೈಲ್ ಫೋನಿನಲ್ಲಿ ಸೆರೆ ಹಿಡಿದಿದ್ದಾರೆ. ನಂತರ ಈ ಚಿತ್ರವನ್ನು ಎಂಎಂಎಸ್ ಮೂಲಕ ಇಡಿ ರಾಜ್ಯಕ್ಕೆ ರವಾನಿಸಿದ್ದಾರೆ. ಈ ಕುರಿತು ಮಾನವ ಹಕ್ಕುಗಳ ಆಯೋಗ ಪ್ರಕರಣವನ್ನು ಪೊಲೀಸರ ಗಮನಕ್ಕೆ ತಂದಾಗ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದಾರೆ.

ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಹಕ್ಕುಗಳ ಆಯೋಗ, ದೌರ್ಜನ್ಯಕ್ಕೀಡಾದ ಯುವತಿಗೆ ನ್ಯಾಯ ಒದಗಿಸಲು ತೀರ್ಮಾನಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X