ಇನ್ಫೋಸಿಸ್ ಕಳ್ಳ ಗುಜರಿ ಅಂಗಡಿ
ನ್ಯೂಯಾರ್ಕ್,
ಆ. 9 : ಭಾರತದ ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯ ಬಗ್ಗೆ ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಆಗಾಗ ಸಣ್ಣತನ ತೋರಿಸುತ್ತಿರುವುದು ಮಾಮೂಲಾಗಿದೆ. ಆದರೆ, ಇದೀಗ ಭಾರತದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲೊಂದಾದ ಇನ್ಫೋಸಿಸ್ ಕಂಪನಿ ವಿರುದ್ಧ ಅಮೆರಿಕ ವಾಗ್ದಾಳಿ ನಡೆಸಿದೆ. ಇನ್ಫೋಸಿಸ್ ಒಂದು ಕಳ್ಳ ಗುಜರಿ ಅಂಗಡಿ (ಚಾಪ್ ಶಾಪ್-ಕದ್ದ ಕಾರುಗಳ ಬಿಡಿಭಾಗಗಳನ್ನು ಮಾರಾಟ ಮಾಡುವ ಸ್ಥಳ) ಎಂದು ಜರಿದಿದೆ. id="toptextpromo">ಇನ್ಫೋಸಿಸ್
ಕಳ್ಳ ಗುಜರಿ ಅಂಗಡಿ ಎಂದು ಟೀಕಿಸಿದವರು ಅಮೆರಿಕದ ಡೆಮಾಕ್ರಟಿಕ್ ಕಂಪನಿಯ ಸೆನೆಟರ್ ಚಾರ್ಲ್ಸ್ ಶುಮರ್. ಬಾರ್ಡರ್ ಸೆಕ್ಯೂರಿಟಿ ಬಿಲ್ ಮೇಲಿನ ಚರ್ಚೆಯ ವೇಳೆ ಶುಮರ್ ಇನ್ಫೋಸಿಸ್ ವಿರುದ್ಧ ದಾಳಿ ನಡೆಸಿದ್ದಾರೆ. ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಇನ್ಫೋಸಿಸ್ ನ ವಕ್ತಾರರು, ಅಮೆರಿಕದ ಸೆನೆಟರ್ ಹೇಳಿಕೆ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಮೆರಿಕದ
ಟೀಕೆಗೆ ಪ್ರಮುಖ ಕಾರಣ ನಿರುದ್ಯೋಗ ಎಂದು ಹೇಳಲಾಗಿದೆ. ಭಾರತದ ಐಟಿ ಕಂಪನಿಗಳ ಹೊರಗುತ್ತಿಗೆ ವಹಿವಾಟಿನಿಂದ ಅಮೆರಿಕದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ. ಹೀಗಾಗಿ ಅಮೆರಿಕ ಸೆನೆಟ್ 2752 ಕೋಟಿ ರುಪಾಯಿಗಳ (60ಕೋಟಿ ಡಾಲರ್) ಬಾರ್ಡರ್ ಸೆಕ್ಯೂರಿಟಿ ಬಿಲ್ ಗೆ ಒಪ್ಪಿಗೆ ನೀಡಿದೆ. ಇದರಿಂದ ಎಚ್-1 ಮತ್ತು ಎಲ್-1 ವೀಸಾ ಅರ್ಜಿಗಳ ಶುಲ್ಕದಲ್ಲಿ ಗಣನೀಯ ಹೆಚ್ಚಳವಾಗಲಿದೆ. ಕನಿಷ್ಟ 2,000 ಡಾಲರ್ ವರೆಗೂ ಶುಲ್ಕ ಹೆಚ್ಚಾಗಲಿದೆ. ವಿಶೇಷವೆಂದರೆ ಭಾರತದ ಐಟಿ ಉದ್ಯೋಗಿಗಳು ಈ ಅರ್ಜಿಗಳನ್ನು ಪಡೆಯುತ್ತಾರೆ.











Click it and Unblock the Notifications