ಗೋಲಗುಂಬಜ್ ರೈಲಿನ ವೇಳೆ ಬದಲು
ಬೆಂಗಳೂರು,
ಆ. 5 : ತುಮಕೂರು-ಬೆಂಗಳೂರು ನಡುವೆ ಪ್ರಯಾಣಿಸುವವರಿಗೆ ನೈಋತ್ಯ ರೈಲ್ವೆ ವಲಯ ಸಂತೋಷದ ಸುದ್ದಿಯೊಂದನ್ನು ಘೋಷಿಸಿದೆ. ಬೆಂಗಳೂರು-ಅರಸೀಕೆರೆ ನಡುವೆ ಸಂಚರಿಸುವ ಗೋಲಗುಂಬಜ್ ಎಕ್ಸ್ ಪ್ರೆಸ್ ರೈಲು ಇನ್ನು ಮುಂದೆ ಸಂಜೆ 7.45ಕ್ಕೆ ಬೆಂಗಳೂರಿನಿಂದ ಹೊರಡಲಿದೆ. id="toptextpromo">ಇದುವರೆಗೆ
ರಾತ್ರಿ 9.10ಕ್ಕೆ ಹೊರಡುತ್ತಿತ್ತು. ಹೀಗಾಗಿ ಕಚೇರಿಯಲ್ಲಿ ಕೆಲಸ ಮುಗಿಸಿ ಸಂಜೆ ರೈಲು ನಿಲ್ದಾಣಕ್ಕೆ ಬಂದು ಗಂಟೆಗಟ್ಟಲೇ ಕಾಯಬೇಕಿತ್ತು. ಬೆಂಗಳೂರಿನಿಂದ ತುಮಕೂರಿಗೆ ಸಂಜೆ 6.20ರ ನಂತರ ರಾತ್ರಿ 9.10ರವರೆಗೆ ರೈಲುಗಳೆ ಇರಲಿಲ್ಲ. ಹೀಗಾಗಿ ರೈಲು ಪಾಸ್ ಇದ್ದ ಪ್ರಯಾಣಿಕರು ಸಹ ಅನಿವಾರ್ಯವಾಗಿ ಬಸ್ಸಿನಲ್ಲಿ ಪ್ರಯಾಣಿಸಬೇಕಿತ್ತು. 9.10ರ ರೈಲಿಗೆ ತೆರಳುವವರು ಮನೆ ಮುಟ್ಟುವ ಹೊತ್ತಿಗೆ ರಾತ್ರಿ 11 ಗಂಟೆಯಾಗುತ್ತಿತ್ತು. id='are-slot-1' class='oiad oi-axt oiadv'> id='top-searched-articles'>ಇದೀಗ
ಬೆಂಗಳೂರು-ಅರಸೀಕೆರೆ ನಡುವೆ ಸಂಚರಿಸುವ ಗೋಲಗುಂಬಜ್ ಎಕ್ಸ್ ಪ್ರೆಸ್ ರೈಲು ರಾತ್ರಿ 7.45ಕ್ಕೆ ಹೊರಟ ನಂತರ 8.30ರ ಹೊತ್ತಿಗೆ ತುಮಕೂರು ತಲುಪಬಹುದು. ತುಮಕೂರಿನಿಂದ ಬೆಳಗ್ಗೆ 7.15ಕ್ಕೆ ಹೊರಡುತ್ತಿದ್ದ ಇದೇ ರೈಲು ಬೆಳಗ್ಗೆ 8.10ಕ್ಕೆ ಹೊರಡಲಿದೆ.











Click it and Unblock the Notifications