ಬೆಂಗಳೂರು ವಿವಿ : ಜೀವವಿಜ್ಞಾನ ಪಿಜಿ ಕೋರ್ಸ್ ಆರಂಭ

Bangalore University
ಬೆಂಗಳೂರು, ಆ. 4 : ಬೆಂಗಳೂರು ವಿಶ್ವವಿದ್ಯಾಲಯವು ಜೀವವಿಜ್ಞಾನ ಸ್ನಾತಕೋತ್ತರ ಪದವಿ ಕೋರ್ಸ್ ನ್ನು ಆರಂಭಿಸಿದೆ. ಈ ವಿಷಯವು ಜೀವ ವೈವಿಧ್ಯತೆ, ಪರಿಸರ ವಿಜ್ಞಾನ, ಅನ್ವಯಿಕ ತಳಿಶಾಸ್ತ್ರ, ಜೈವಿಕ ತಂತ್ರಜ್ಞಾನ ಇತ್ಯಾದಿ ಪ್ರಚಲಿತ ವಿಷಯ ಸಮ್ಮಿಳಿತಗೊಂಡ ಕೋರ್ಸ್ ಇದಾಗಿದೆ.

ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಜೀವವಿಜ್ಞಾನ ಕೋರ್ಸ್ ಸೂಕ್ತ ವೇದಿಕೆಯನ್ನು ಒದಗಿಸುತ್ತದೆ ಎಂದು ಜೀವವಿಜ್ಞಾನದ ಮುಖ್ಯಸ್ಥ ಡಾ ಎಂ ವಿ ವಿ ಸುಬ್ರಮಣ್ಯ ಅವರ ಅಭಿಮತವಾಗಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗವೂ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗೆ ನಿರೂಪಿಸಿರುವ(ಎನ್ಇಟಿ) ಪಠ್ಯಕ್ರಮವನ್ನು ಆಧರಿಸಿ ಈ ಪದವಿ ರೂಪುರೇಷೆ ಸಿದ್ದಪಡಿಸಲಾಗಿದೆ.

ಅಂತೆಯೇ, ರಾಷ್ಟ್ರ ಮತ್ತು ರಾಜ್ಯ ಮಟ್ಟದ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ಈ ಪಠ್ಯಕ್ರಮವು ಪೂರಕವಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಔಷಧಿ ತಯಾರಿಕಾ ಘಟಕಗಳು ಹಾಗೂ ಜೈವಿಕ ತಂತ್ರಜ್ಞಾನ ಸಂಸ್ಥೆಗಳು ಜೀವ ವಿಜ್ಞಾನದಲ್ಲಿ ಪರಿಣತಿ ಹೊಂದಿದ ಅಭ್ಯರ್ಥಿಗಳಿಗೆ ಆಧ್ಯತೆ ನೀಡುತ್ತಿವೆ ಎಂದು ಸುಬ್ರಮಣ್ಯ ವಿವರಿಸಿದರು.

ಈ ಸ್ನಾತಕೋತ್ತರ ಪದವಿಯನ್ನು ಜ್ಞಾನಭಾರತಿ ಆವರಣದಲ್ಲಿರುವ ರೇಷ್ಮೆಕೃಷಿ ವಿಭಾಗದಲ್ಲಿ ಪ್ರಾರಂಭಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಜೀವವಿಜ್ಞಾನ ಪದವಿ ಕೇಂದ್ರದ ಸಂಯೋಜಕರಿಂದ ಪಡೆಯಬಹುದು. ಮೊಬೈಲ್ ಸಂಖ್ಯೆ - 98803 11264

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+