ಶಿವಮೊಗ್ಗ : ಸೆ.21 ರಿಂದ ವಾಯುಪಡೆ ಹುದ್ದೆಗಳ ನೇಮಕಾತಿ
ಶಿವಮೊಗ್ಗ,
ಆ. 3 : ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ ಏರ್‌ಮನ್ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ಸೆಪ್ಟೆಂಬರ್ 21 ರಿಂದ 26ರವರೆಗೆ ಚಿತ್ರದುರ್ಗದಲ್ಲಿ ನೇಮಕಾತಿ ನಡೆಯಲಿದೆ. id="toptextpromo">ಏರ್‌ಮನ್
ತಾಂತ್ರಿಕೇತರ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಮತ್ತು ತಾಂತ್ರಿಕ ಹುದ್ದೆಗೆ ದ್ವಿತೀಯ ಪಿಯುಸಿ ಅಥವಾ 3 ವರ್ಷಗಳ ಪಾಲಿಟೆಕ್ನಿಕ್ ಡಿಪ್ಲೋಮಾದಲ್ಲಿ ಶೇ. 50ರಷ್ಟು ಅಂಕದೊಂದಿಗೆ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯು ಜುಲೈ 1989 ರಿಂದ ಸೆಪ್ಟೆಂಬರ್ 1993ರೊಳಗೆ ಜನಿಸಿದವರಾಗಿರಾಗಿದ್ದು, 152 ಸೆಂ.ಮೀ ಎತ್ತರ ಇರಬೇಕು. id='are-slot-1' class='oiad oi-axt oiadv'> id='top-searched-articles'>ಅರ್ಹ
ಅಭ್ಯರ್ಥಿಗಳು ತಮ್ಮ ಹೆಸರನ್ನು ಆಗಸ್ಟ್ 10ರೊಳಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು. ನೋಂದಾಯಿತ ಅಭ್ಯರ್ಥಿಗಳಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಉಚಿತವಾಗಿ ಪರೀಕ್ಷಾಪೂರ್ವ ತರಬೇತಿಯನ್ನು ಏರ್ಪಡಿಸಲಾಗುವುದು. ವಿವರಗಳಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ರಂಗಧೋಳ್ ಕಾಂಪ್ಲೆಕ್ಸ್, ಸವಳಂಗ ರಸ್ತೆ, ಶಿವಮೊಗ್ಗ. ದೂರವಾಣಿ ಸಂಖ್ಯೆ 08182- 222293ನ್ನು ಸಂಪರ್ಕಿಸಬಹುದಾಗಿದೆ.











Click it and Unblock the Notifications