ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2011ರ ಜನವರಿಯಲ್ಲಿ ಸಂಸ್ಕೃತ ಸಮ್ಮೇಳನ

By Mrutyunjaya Kalmat
|
Google Oneindia Kannada News

Om logo
ಬೆಂಗಳೂರು, ಆ. 2 : ಎಲ್ಲ ಭಾಷೆಗಳಿಗೂ ಮೂಲ ಭಾಷೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂಸ್ಕೃತ ಭಾಷೆಗೆ ಜಾಗತಿಕ ಮನ್ನಣೆ ದೊರೆಕಿಸಿಕೊಡುವ ನಿಟ್ಟಿನಲ್ಲಿ 2011ರ ಜನವರಿ 7 ರಿಂದ 10ರ ವರೆಗೆ ಬೆಂಗಳೂರಿನಲ್ಲಿ ಪ್ರಥಮ ವಿಶ್ವ ಸಂಸ್ಕೃತ ಪುಸ್ತಕ ಸಮ್ಮೇಳನ ಸಂಘಟಿಸಲಾಗಿದೆ.

ಸಂಸ್ಕೃತ ಭಾರತಿ ಈ ಸಮ್ಮೇಳನದ ರೂವಾರಿ. ರಾಜ್ಯ ಸರಕಾರ ಸೇರಿದಂತೆ ದೇಶದ 15 ಸಂಸ್ಕೃತ ವಿಶ್ವವಿದ್ಯಾಲಯಗಳು ಇದಕ್ಕೆ ಸಹಯೋಗ ಒದಗಿಸಲಿದೆ. ಪ್ರತಿ 3 ವರ್ಷಕ್ಕೊಮ್ಮೆ ಜರುಗುವ ವಿಶ್ವ ಪುಸ್ತಕ ಸಮ್ಮೇಳನಕ್ಕಿಂತ ಈ ಸಮ್ಮೇಳನ ವಿಭಿನ್ನ. ಈ ಸಮ್ಮೇಳನದಲ್ಲಿ ಕೇವಲ ಸಂಸ್ಕೃತ ಭಾಷೆ. ಸಂಸ್ಕೃತ ಸಾಹಿತ್ಯದ ಬಗ್ಗೆ ಮಾತ್ರ ಚಿಂತನ ಮಂಥನ ನಡೆಯಲಿದೆ. ಅಖಿಲ ಭಾರತ ಸಂಸ್ಕೃತ ಸಮ್ಮೇಳನವೂ ಇದರ ಜೊತೆಗೆ ನಡೆಯಲಿದೆ. ಈ ಎರಡೂ ಸಮ್ಮೇಳನಗಳು ಜನವರಿ 7 ರಿಂದ 10ವರಗೆ ನಡೆಯಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X