ಬೆಂಗ್ಳೂರಲ್ಲಿ ಭೂಪಾಳಂ ಕುಟುಂಬ ಸಮ್ಮಿಲನ

Bhoopalam family meet in Bengaluru
ಬೆಂಗಳೂರು, ಜು. 30 : ಭೂಪಾಳಂ ಕುಟುಂಬ ವೃಕ್ಷದ ಸ್ನೇಹ ಸಮ್ಮಿಲನವನ್ನು ಆಚರಿಸಲು ನಿರ್ಧರಿಸಲಾಗಿದೆ. 2010ರ ಡಿಸೆಂಬರ್ 25 ಮತ್ತು 26ರಂದು ಎರಡು ದಿವಸಗಳ ಸಮ್ಮಿಲನ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ. ಭೂಪಾಳಂ ಕುಟುಂಬ ವೃಕ್ಷಕ್ಕೆ ಸೇರಿದ ಪ್ರತಿಯೊಬ್ಬರಿಗೂ ಈ ಕುಟುಂಬ ಸ್ನೇಹ ಸಮ್ಮಿಲನಕ್ಕೆ ಸ್ವಾಗತ.

ಸಮ್ಮಿಲನವನ್ನು ಬೆಂಗಳೂರು ಬಸವನಗುಡಿಯ ಸೌತ್ ಎಂಡ್ ಸರ್ಕಲ್ ಸಮೀಪ ಇರುವ ಪೈ ವಿಸ್ಟ ಕನ್ವೆನ್ಷನ್ ಹಾಲ್ ನಲ್ಲಿ ಏರ್ಪಡಿಸಲಾಗಿದೆ. ಶಿವಮೊಗ್ಗದ ಭೂಪಾಳಂ ರುಕ್ಮಯ್ಯ ಗ್ರೂಪ್ ಕುಟುಂಬದವರು ಕಲೆತು ಈ ಕಾರ್ಯಕ್ರಮ ವ್ಯವಸ್ಥೆಗೊಳಿಸುತ್ತಿದ್ದರೂ ಸಹ ನಾನಾ ಕಡೆ ಚದುರಿಹೋಗಿರುವ ಪ್ರತಿಯೊಬ್ಬ ಭೂಪಾಳಂ ಸದಸ್ಯರಿಗೂ ಆಮಂತ್ರಣವಿರುತ್ತದೆ.

ನೀವು ಭೂಪಾಳಂ ಕುಟುಂಬಕ್ಕೆ ಸೇರಿದವರಾಗಿದ್ದರೆ ತಮಗೆ ಗೊತ್ತಿರುವ ಭೂಪಾಳಂ ಮಿತ್ರ ಕುಟುಂಬ ವರ್ಗಗಳಿಗೆ ಈ ವಿಷಯವನ್ನು ತಿಳಿಸಬೇಕೆಂದು ಕೋರಲಾಗಿದೆ. ಅಂಥವರ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ಆಯೋಜಕರಿಗೆ ತಿಳಿಸಲು ವಿನಂತಿಸಿಕೊಳ್ಳಲಾಗಿದೆ.

ಭೂಪಾಳಂ ಕುಟುಂಬದ ಪಿತಾಮಹರೇ ಆಗಿದ್ದ ಆರ್ ಪುಟ್ಟನಂಜಪ್ಪ ಅವರ ಜನ್ಮಶತಾಬ್ಧಿಯನ್ನು ಇದೇ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ಕಾರ್ಯಕ್ರಮದ ಪೂರ್ಣ ವಿವರಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುತ್ತದೆ. ತಮಗೆ ಆದರದ ಸ್ವಾಗತ.

ನಮ್ಮ ಸಂಪರ್ಕ ವಿಳಾಸ : ಭೂಪಾಳಂ ಪ್ರಕಾಶ್, ಶತಾಬ್ದಿ ಪೇಯಿಂಟ್ಸ್, ಬೆಂಗಳೂರು. [email protected] ದೂರವಾಣಿ : 99005 23379 ಅಥವಾ ಭೂಪಾಳಂ ಪಿ ಶ್ರೀನಾಥ್ , ತ್ರಿಲೋಕ್ ಬಾಂಬೇ ಡೈಯಿಂಗ್ ಶೋ ರೂಂ. ಎಂಜಿ ರಸ್ತೆ, ಬೆಂಗಳೂರು [email protected] ದೂರವಾಣಿ : 98452 57101

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+