ಲ್ಯಾಪ್ ಟಾಪ್ ಬೆಲೆ ಕೇವಲ 1,500 ರುಪಾಯಿ
ನವದೆಹಲಿ,
ಜು. 23 : ಲ್ಯಾಪ್ ಟಾಪ್ ಖರೀದಿಸಬೇಕು ಎನ್ನುವ ವಿದ್ಯಾರ್ಥಿಗಳ ಬಹುದಿನಗಳ ಕನಸು ನನಸಾಗುವ ಕಾಲ ಕೂಡಿ ಬಂದಿದೆ. ವಿದ್ಯಾರ್ಥಿಗಳಿಗಾಗಿ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಕೇವಲ 1,500 ರುಪಾಯಿಗಳ ಬೆಲೆಯ ಅಗ್ಗದ ಲ್ಯಾಪ್ ಟಾಪ್ ನ್ನು ಬಿಡುಗಡೆ ಮಾಡಿದೆ. id="toptextpromo">ಕೇಂದ್ರ
ಮಾನವ ಸಂಪನ್ಮೂಲ ಇಲಾಖೆ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಗುರುವಾರ ನವದೆಹಲಿಯಲ್ಲಿ ಟ್ಯಾಬ್ಲೆಟ್ ಪಿಸಿಯನ್ನು ಬಿಡುಗಡೆ ಮಾಡಿದ್ದು, 2011 ಶೈಕ್ಷಣಿಕ ವರ್ಷದಿಂದ ಲ್ಯಾಪ್ ಟಾಪ್ ವಿದ್ಯಾರ್ಥಿಗಳಿಗೆ ದೊರೆಯಲಿದೆ. ಇದರ ಬೆಲೆ ಕೇವಲ 1,500 ರುಪಾಯಿ (35 ಡಾಲರ್). ಲ್ಯಾಪ್ ಟಾಪ್ ಬೆಲೆ 1,500 ಆಗಿದ್ದು, ಕೇಂದ್ರ ಸರಕಾರ ಶೇ.50ರಷ್ಟು ಸಬ್ಸಿಡಿ ಒದಗಿಸಲಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಇದು ಕೇವಲ 750 ರುಪಾಯಿಗಳಲ್ಲಿ ಸಿಗಲಿದೆ. id='are-slot-1' class='oiad oi-axt oiadv'> id='top-searched-articles'>ಈ
ಲ್ಯಾಪ್ ಟಾಪ್ ಟಚ್ ಸ್ಕ್ರೀನ್ ಸೌಲಭ್ಯ, ಇನ್ ಬಿಲ್ಟ್ ಕೀಬೋರ್ಡ್, 2 ಜಿಬಿ, ವೈಪೈ ಸಂಪರ್ಕ, ಯುಎಸ್ ಬಿ ಪೋರ್ಟ್ ಹೊಂದಿದ್ದು, 2 ವ್ಯಾಟ್ ನ ಬ್ಯಾಟರಿ ಇದೆ. ಈ ಲ್ಯಾಪ್ ಟಾಪ್ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮಾನವ ಸಂಪನ್ಮೂಲ ಸಚಿವಾಲಯ ವಿದ್ಯಾರ್ಥಿಗಳಿಗೆ ವಿತರಿಸಲಿದ್ದು, ಅಂತಿಮ ಸಾಗಾಣಿಕೆ ಖರ್ಚನ್ನೂ ಒಳಗೊಂಡಿರುತ್ತದೆ.











Click it and Unblock the Notifications