ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಂಗಿ ಕುಟುಂಬಗಳಿಗೆ ಆರೆಸ್ಸೆಸ್ ಸಾಂತ್ವನ

By * ಚಂದ್ರಶೇಖರ್, ಸವಣೂರು
|
Google Oneindia Kannada News

Minister Bommai Visits Savanur
ಸವಣೂರು, ಜು.22: ಮಾನವ ಕುಲಕ್ಕೆ ಅಪಮಾನಕಾರಿ ಎನಿಸುವ ರೀತಿಯಲ್ಲಿ ಪ್ರತಿಭಟನೆ ತೋರಿದ ಭಂಗಿ ಸಮುದಾಯದ ಮನೆಗಳಿಗೆ ಭೇಟಿ ನೀಡಿದ ವಿಶ್ವ ಹಿಂದೂ ಪರಿಷತ್ ಹಾಗೂ ಆರ್.ಎಸ್.ಎಸ್ ಮುಖಂಡರು ಸಾಂತ್ವನ ಹೇಳುವುದರೊಂದಿಗೆ, ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿಯನ್ನೂ ಸಲ್ಲಿಸಿದರು.

ಮಲವನ್ನು ಸುರಿದುಕೊಂಡು ಬದುಕಿನ ಹಕ್ಕು ಕೇಳಿದ ಭಂಗಿಗಳ ಪರಿಸ್ಥಿತಿ ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಇದು ಅತ್ಯಂತ ದುರದೃಷ್ಟಕರವಾದ ಘಟನೆಯಾಗಿದೆ. ಊರಿನ ಕೊಳೆಯನ್ನು ತೆಗೆಯುವ ಕುಟುಂಬಗಳ ಬದುಕನ್ನು ಅಸಹನೀಯ ಮಾಡಿದ ವ್ಯಕ್ತಿಗಳ ವಿರುದ್ಧ ವಿ.ಹಿಂ.ಪರಿಷತ್ ಬಲವಾಗಿ ಪ್ರತಿಭಟಿಸುತ್ತದೆ ಎಂದು ವಿಹಿಂಪ ಮುಖಂಡರು ಹೇಳಿದರು.

ಗ್ಯಾಲರಿ: ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ಮಾಡಿದ ಭಂಗಿ

ಅನಾದಿ ಕಾಲದಿಂದಲೂ ಭಂಗಿಗಳು ವಾಸಿಸುತ್ತಿರುವ ಸ್ಥಳದ್ಲಲಿಯೇ ಅವರಿಗೆ ಬದುಕಲು ಬಿಡಬೇಕು. ಅವರ ಪರಿಸರದ್ಲಲಿನ ಮಲಿನತೆ, ಕೊಳಚೆಯನ್ನು ತೆರವುಗೊಳಿಸಬೇಕು. ನಾಗರೀಕ ಸಹ್ಯವಾದ ಬದುಕನ್ನು ಕಲ್ಪಿಸಬೇಕು. ಇದು ಸರಕಾರದ ಕರ್ತವ್ಯವಾಗ್ದಿದು, ಭಂಗಿಗಳ ಬಗ್ಗೆ ನಿಷ್ಪಕ್ಷಪಾತವಾದ ಕ್ರಮ ಜರುಗಿಸಬೇಕು ಎಂದು ಕೋರಲಾಗಿದೆ.

ವಿಶ್ವ ಹಿಂದೂ ಪರಿಷತ್‌ನ ಜ್ಲಿಲಾ ಸಹ ಕಾರ್ಯದರ್ಶಿ ಅರುಣ ಬಗರೆ, ಪ್ರವೀಣ ಚರಂತಿಮಠ, ಪುರಸಭೆ ಸದಸ್ಯರಾದ ಶಿವಪ್ಪ ಜಡಿ, ಚನ್ನವೀರಸ್ವಾಮಿ ಸಾಲಿಮಠ ಮುಂತಾದವರು ಉಪಸ್ಥಿತರಿದ್ದರು.

ಭಂಗಿಗಳಿಗೆ ತಲೆ ಬಾಗಿದ ಸರ್ಕಾರ: ಇದಕ್ಕೂ ಮುನ್ನ ಸವಣೂರಿನ ಕಮಾಲ ಬಂಗಡಿ ಪ್ರದೇಶದಲ್ಲಿನ ಭಂಗಿಗಳ ಜೋಪಡಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಭಂಗಿಗಳ ನೋವನ್ನು ಆಲಿಸಿದರು.

ಭಂಗಿ ವೃತ್ತಿಯನ್ನು ಮೊದಲು ನಿಲ್ಲಿಸಿ. ಈ ವ್ಯವಸ್ಥೆಯಿಂದ ಹೊರಬನ್ನಿ. ನಿಮ್ಮ ಮನಸ್ಸಿನಲ್ಲಿನ ಆತಂಕವನ್ನು ದೂರಗೊಳಿಸಿಕೊಳ್ಳಿ. ನಿಮ್ಮ ಪ್ರತಿಯೊಂದು ಸಮಸ್ಯೆಗಳನ್ನು ನನ್ನ ಗಮನಕ್ಕೆ ತನ್ನಿ ಎಂದು ಸೂಚಿಸಿದ ಅವರು, ಭಂಗಿಗಳನ್ನು ಈ ಹಂತದಲ್ಲಿ ಇಟ್ಟಿರುವ ವ್ಯವಸ್ಥೆಯ ಪರವಾಗಿ ಕ್ಷಮೆಯಾಚಿಸಿದರು

ಎಲ್ಲ ಏಳು ಭಂಗಿ ಕುಟುಂಬಗಳಿಗೂ ಪ್ರತ್ಯೇಕವಾದ ಮನೆ ಸೇರಿದಂತೆ ಕುಡಿಯುವ ನೀರು, ವಿದ್ಯುತ್ ಮೊದಲಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಅರ್ಹ ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಹಣಕಾಸಿನ ನೆರವು ನೀಡಲಾಗುತ್ತದೆ. ಕುಟುಂಬದ ಮಕ್ಕಳನ್ನು ದತ್ತು ಪಡೆದು ಶೈಕ್ಷಣಿಕ ಜವಾಬ್ದಾರಿ ವಹಿಸಿಕೊಳ್ಳಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X