ಹೊಸ ಸಿಇಒ ಹುಡುಕಾಟದಲ್ಲಿ ನೋಕಿಯಾ

ಮೋಟರೋಲಾದ ನಿಸ್ತಂತು ಮೂಲಸೌಕರ್ಯಗಳ ಸೌಲಭ್ಯಗಳ ಖರೀದಿಗೆ ನೋಕಿಯಾ ಸಿಮೇನ್ಸ್ ಮುಂದಾಗಿರುವ ಬೆನ್ನಲ್ಲೇ ಈ ಸುದ್ದಿ ಸ್ಫೋಟಗೊಂಡಿರುವುದು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ ಈಗಿನ ಅಧಿಕಾರಿ ಒಲ್ಲಿ ಪೆಕ್ಕ ಕಲ್ಲಸುವೋ ಅವರನ್ನು ಬದಲಾಯಿಸಲು ಕಂಪೆನಿ ನಿರ್ಧರಿಸಿದೆ. ನೋಕಿಯಾದ ಉನ್ನತ ಶ್ರೇಣಿಯ ಮೊಬೈಲ್ ಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು ವಿಫಲವಾಗಿರುವುದೇ ಕಲ್ಲಿಸೊವೊ ಅವರ ಪದಚ್ಯುತಿಗೆ ಕಾರಣ ಎನ್ನಲಾಗಿದೆ.
ನೋಕಿಯಾ ಆಡಳಿತ ಮಂಡಳಿ ಈ ತಿಂಗಳ ಅಂತ್ಯದಲ್ಲಿ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಲಲಿದೆ ಎಂದು ವರದಿ ಹೇಳಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ನೋಕಿಯಾ ಈಗಲೂ ಶೇ.40 ಪಾಲು ಹೊಂದಿದ್ದು, ಹೈ ಎಂಡ್ ಮೊಬೈಲ್ ಗಳಲ್ಲಿ ಮಾರುಕಟ್ಟೆಯಲ್ಲಿ ಯಶ ಪಡೆಯುವಲ್ಲಿ ವಿಫಲವಾಗಿದ್ದು ಪ್ರತಿಸ್ಪರ್ಧಿ ಆಪಲ್ ಗಿಂತ ಹಿಂದೆ ಬಿದ್ದಿದೆ.
ಆಪಲ್ ತನ್ನ ಮೊಬೈಲ್ (ಐಫೋನ್ )ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಕ್ಕೂ ಮೊದಲೇ 2006ರಲ್ಲಿ ಕಲ್ಲಿಕೊವೊ ಅವರು ನೋಕಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸಕ್ಕೆ ಸೇರಿದ್ದರು. ಆದರೆ, ಆಪಲ್ ಗೆ ಸ್ಪರ್ಧೆನೀಡಲು ಕಂಪೆನಿ ಹಲವು ಬಾರಿ ಸ್ಪರ್ಧಿಸಿ ವಿಫಲವಾಗಿತ್ತು.












Click it and Unblock the Notifications