ರಾಜ್ಯದ 5 ಗ್ರಾಪಂಗಳಿಗೆ ಗೂಗಲ್ ಪ್ರಶಸ್ತಿ

2008ರಲ್ಲಿ Google.org Gram Panchayat Puraskar (GGPP) ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು, ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಸಮಾಜಸೇವೆ, ಗ್ರಾಮೀಣಾಭಿವೃದ್ಧಿ, ನಿರಂತರ ಕುಡಿಯುವ ನೀರಿನ ಸಂಪರ್ಕ, ಗ್ರಾಮೀಣ ವಿದ್ಯುತ್ ವ್ಯವಸ್ಥೆ, ಮೂಲಭೂತ ಸೌಲಭ್ಯಗಳ ಬಳಕೆ, ಶೌಚಾಲಯಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳು ಮಾಡಿದ ಸಾಧನೆ ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಕರ್ನಾಟಕದ 5 ಗ್ರಾಮಗಳಾದ ಕಿರಗೂರು(ಕೊಡುಗು ಜಿಲ್ಲೆ), ನಾಗರಕೆರೆ(ಮಂಡ್ಯ ಜಿಲ್ಲೆ), ನಲ್ಲೂರು(ತುಮಕೂರು ಜಿಲ್ಲೆ), ಶಿರಗುಪ್ಪಿ(ಬೆಳಗಾವಿ) ಮತ್ತು ಸಾಣೂರು(ಉಡುಪಿ) ಗ್ರಾಮ ಪಂಚಾಯಿತಿಗಳು ಗೂಗಲ್ ಗ್ರಾಮ ಪಂಚಾಯಿತಿ ಪುರಸ್ಕಾರಕ್ಕೆ ಪಾತ್ರವಾಗಿವೆ. ಕಿರಿಗೂರು, ನಾಗರಕೆರೆ ಮತ್ತು ನಲ್ಲೂರು ಗ್ರಾಮ ಪಂಚಾಯಿತಿಗಳು ಶಿಕ್ಷಣ ಕ್ಷೇತ್ರದಲ್ಲಿ ಗ್ರಾಮಗಳಲ್ಲಿ ಮಾಡಿದ ಗಮನಾರ್ಹ ಸಾಧನೆಯಿಂದ ಈ ಗೌರವ ಸಂದಿದೆ. ಶಿರಗುಪ್ಪಿ ಮತ್ತು ಸಾಣೂರು ಗ್ರಾಮ ಪಂಚಾಯಿತಿಗಳಿಗೆ ಗ್ರಾಮಗಳಿಗೆ ಉತ್ತಮ ನೀರಿನ ಸಂಪರ್ಕ ಒದಗಿಸಿದ್ದರಿಂದ ಗೂಗಲ್ ಪ್ರಶಸ್ತಿಯನ್ನು ಪಡೆದುಕೊಂಡಿವೆ.
ಆಂಧ್ರಪ್ರದೇಶದ 5 ಗ್ರಾಮಗಳಾದ ಗಂಗದೇವಿಪಲ್ಲಿ(ಗೇಸುಕೊಂಡ ಜಿಲ್ಲೆ), ಪಾಂಡುರಂಗಪುರಂ(ನಂದ್ಯಾಲ್ ಜಿಲ್ಲೆ), ಮೆಡೆಪಲ್ಲಿ(ಮುದಿಗೊಂಡ ಜಿಲ್ಲೆ), ಕೋಣಾಪುರ(ನಲ್ಲಬೆಲ್ಲಿ ಜಿಲ್ಲೆ), ಜಿಗುರುಪಾಡು (ಕಡಿಯಂ ಜಿಲ್ಲೆ) ಗ್ರಾಮ ಪಂಚಾಯಿತಿಗಳು ಗೂಗಲ್ ಪುರಸ್ಕಾರವನ್ನು ಪಡೆದುಕೊಂಡಿವೆ ಎಂದು ಗೂಗಲ್ ಇಂಡಿಯಾ ತಿಳಿಸಿದೆ.












Click it and Unblock the Notifications