ರಿಲಯನ್ಸ್ ಗೆ ಜೂನ್ ನಲ್ಲಿ 2.8 ಮಿಲಿಯ ಹೊಸ ಗ್ರಾಹಕರು

ಇದರಿಂದ ರಿಲಯನ್ಸ್ ನ ಒಟ್ಟು ಗ್ರಾಹಕರ ಸಂಖ್ಯೆ ಜೂನ್ ಅಂತ್ಯಕ್ಕೆ 110ಮಿಲಿಯನ್ ಗಳಿಗೆ ತಲುಪಿದೆ. ಜೂನ್ ನಲ್ಲಿ ಜಿಎಸ್ಎಮ್ ಹಾಗೂ ಸಿಡಿಎಮ್‌ಎ ಸೇವೆಗಳ ಒಟ್ಟು ಗ್ರಾಹಕರ ಸಂಖ್ಯೆ 2.8 ಮಿಲಿಯನ್ ನಷ್ಟು ಹೆಚ್ಚಿದೆ ಎಂದು ಕಂಪೆನಿ ಹೇಳಿದೆ. ಕಂಪೆನಿ ಕಳೆದ ತ್ರೈಮಾಸಿಕದಲ್ಲಿ 8.4 ಮಿಲಿಯ ಹೊಸ ನಿಸ್ತಂತು ಗ್ರಾಹಕರನ್ನು ಹೊಂದಿದೆ ಎಂದು ತಿಳಿಸಿದೆ.
ಕಳೆದ ಮೇ ತಿಂಗಳಿನಲ್ಲಿ ನಿಸ್ತಂತು ದೂರವಾಣಿ ಗ್ರಾಹಕರ ಸಂಖ್ಯೆ 16.3 ಮಿಲಿಯನ್ ಗಳಾಗಿದ್ದು ಒಟ್ಟು ದೇಶದ ನಿಸ್ತಂತು ದೂರವಾಣಿ ಬಳಕೆದಾರರ ಸಂಖ್ಯೆ ಮೇ ಅಂತ್ಯಕ್ಕೆ 617.53 ಮಿಲಿಯನ್ ಗಳಿಗೇರಿದೆ ಎಂದು ಟ್ರಾಯ್ ತಿಳಿಸಿದೆ.
ಜಿಎಸ್ಎಂ ಹಾಗೂ ಸಿಡಿಎಂಎ ಮೊಬೈಲ್ ಗ್ರಾಹಕರಲ್ಲದೆ, ಬ್ರಾಂಡ್ ಬ್ಯಾಂಡ್ ಹಾಗೂ ಡಿಟಿಎಚ್ ಕ್ಷೇತ್ರದಲ್ಲೂ ರಿಲಯನ್ಸ್ ಮುನ್ನುಗ್ಗುತ್ತಿದ್ದು, ನಿಸ್ತಂತು ಸೌಲಭ್ಯ ಒದಗಿಸುವ ಆಗ್ರಗಣ್ಯ ಸಂಸ್ಥೆಯಾಗಿ ಹೊರಹೊಮ್ಮಿದೆ.












Click it and Unblock the Notifications