ಕೆನರಾ ಬ್ಯಾಂಕ್ ತ್ರೈಮಾಸಿಕ ಲಾಭದಲ್ಲಿ ಶೇ.82ಹೆಚ್ಚಳ
ಬೆಂಗಳೂರು,
ಜು.19: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಕಳೆದ ಜೂನ್ 30 ಕ್ಕೆ ಕೊನೆಗೊಂಡ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 1,013.37 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿದ್ದು ಒಟ್ಟು ಲಾಭದಲ್ಲಿ ಶೇ.82.48 ಏರಿಕೆಯಾಗಿದೆ. id="toptextpromo">ಕಳೆದ
ವರ್ಷ ಈ ಅವಧಿಯಲ್ಲಿ ಬ್ಯಾಂಕ್ 555.33 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿತ್ತು. ಬ್ಯಾಂಕಿನ ಒಟ್ಟು ಲಾಭದಲ್ಲಿ ಶೇ.17.15 ಏರಿಕೆ ದಾಖಲಾಗಿದ್ದು, ಮೊದಲ ತ್ರೈಮಾಸಿಕದಲ್ಲಿ 5,894.85 ಕೋಟಿ ರೂಪಾಯಿಗಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಗೆ ಲಾಭ 5,031.95 ಕೋಟಿ ರೂಪಾಯಿಗಳಾಗಿತ್ತು. id='are-slot-1' class='oiad oi-axt oiadv'> id='top-searched-articles'>ಖಜಾನೆ
ವಿಭಾಗದಲ್ಲಿ ಬ್ಯಾಂಕಿನ ಆದಾಯ ಜೂನ್ 30ಕ್ಕೆ ಶೇ.40.35ರಷ್ಟು ಏರಿಕೆ ದಾಖಲಿಸಿದ್ದು ಒಟ್ಟು 1,565.49ಕೋಟಿ ರೂಪಾಯಿಗಳಿಗೇರಿದೆ. ಕಳೆದ ವರ್ಷ ಇದು 1,115.39 ಕೋಟಿ ರೂಪಾಯಿಗಳಾಗಿತ್ತು. ಚಿಲ್ಲರೆ ಬ್ಯಾಂಕಿಂಗ್ ವ್ಯವಹಾರದಲ್ಲಿ ಶೇ.11.02 ಕುಸಿತವಾಗಿದ್ದು, 1,496.20 ಕೋಟಿಗಳಿಗೆ ಕುಸಿದಿದ್ದು, ಹಿಂದಿನ ವರ್ಷ ಇದು 1,681.58ಕೋಟಿ ರೂಪಾಯಿಗಳಾಗಿತ್ತು.











Click it and Unblock the Notifications