ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ನೆರವು ನೀಡಿ

By * ಕೆಆರ್ ಸೋಮನಾಥ್, ಶಿವಮೊಗ್ಗ
|
Google Oneindia Kannada News

Snake bitten child with mother
ಶಿವಮೊಗ್ಗ, ಜು. 19 : ಹಾವು ಕಡಿತದಿಂದ ಗಾಯಗೊಂಡಿರುವ 2 ವರ್ಷದ ಕಂದಮ್ಮ ಹೆಚ್ಚಿನ ಚಿಕಿತ್ಸೆಗಾಗಿ ದಾನಿಗಳಿಗಾಗಿ ಕಾದು ಕುಳಿತಿದೆ. ಶಿವಮೊಗ್ಗದ ವಾತ್ಸಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗಾಗಿ ದಾಖಲಿಸಬೇಕಾಗಿದೆ.

ಈಗಾಗಲೆ ಆಸ್ಪತ್ರೆಯ ವೆಚ್ಚ 80 ಸಾವಿರ ದಾಟಿದ್ದು, ಅದನ್ನು ಭರಿಸದೆ ಮಗುವಿನ ಪಾಲಕರು ಕಂಗಾಲಾಗಿದ್ದಾರೆ. ಇನ್ನು ಬೆಂಗಳೂರಿಗೆ ಕರೆತಂದು ಹೆಚ್ಚಿನ ಚಿಕಿತ್ಸೆ ಕೊಡಿಸುವುದು ದೂರದ ಮಾತಾಗಿದೆ. ಮಾನವೀಯತೆಯುಳ್ಳ ಓದುಗರು ಮಗುವಿನ ಚಿಕಿತ್ಸೆಗಾಗಿ ನೆರವು ನೀಡಬಹುದಾಗಿದೆ.

ಬೂದಿಗೆರೆ ಸಮೀಪದ ಆಲದಹಳ್ಳಿ ಸೋಮಿನಕೊಪ್ಪ ಗ್ರಾಮದ ವಾಸಿ ನಾಗರಾಜ್ ಸಂಗೀತ ದಂಪತಿಗಳ ಮಗು ಭೂಮಿಕಳಿಗೆ ಕೆಲ ದಿನಗಳ ಹಿಂದೆ ಮನೆಯ ಮುಂದೆ ಆಟವಾಡುತ್ತಿದ್ದಾಗ ಮಗುವಿನ ಕಾಲಿಗೆ ಹಾವು ಕಚ್ಚಿತ್ತು. ಕೂಡಲೇ ಮಗುವನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ತಂದರಾದರೂ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ದಾಖಲಿಸಲು ತಿಳಿಸಿದರು. ನಂತರ ಜೀವನ್ಮರಣದಲ್ಲಿದ್ದ ಮಗುವನ್ನು ಚಿಕಿತ್ಸೆಗಾಗಿ ವಾತ್ಸಲ್ಯ ಆಸ್ಪತ್ರೆಗೆ ದಾಖಲಿಸಲಾಯಿತು.

ಸಕಾಲಕ್ಕೆ ವೈದ್ಯರು ನೀಡಿದ ಚಿಕಿತ್ಸೆಯಿಂದ ಮಗು ಚೇತರಿಸಿಕೊಂಡಿದೆ. ಇದುವರೆಗಿನ ಆಸ್ಪತ್ರೆಯ ವೆಚ್ಚ 80 ಸಾವಿರ ರು.ಗಳಷ್ಟಾಗಿದ್ದು, ಅಷ್ಟೊಂದು ಹಣವನ್ನು ಭರಿಸಲಾಗದೆ ರೈತ ಕುಟುಂಬ ಕಂಗಲಾಗಿದೆ. ಮಗುವಿನ ತಾಯಿ ಅಸಹಾಯಕಳಾಗಿ ಆಸ್ಪತ್ರೆಯಲ್ಲಿಯೇ ಕಾಲ ಕಳೆಯಬೇಕಾದ ದುಃಸ್ಥಿತಿ ಬಂದೊದಗಿದೆ.

ಮಗುವಿನ ಅಜ್ಜ-ಅಜ್ಜಿ ಆಸ್ಪತ್ರೆಯ ಕೆಲವೊಂದು ಖರ್ಚು ವೆಚ್ಚವನ್ನು ನೋಡಿಕೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಮಗುವನ್ನು ದಾಖಲಿಸಬೇಕಾಗಿದ್ದು, ಮಗುವಿನ ಬಗ್ಗೆ ಕಳಕಳಿ ಹೊಂದಿರುವ ಹೃದಯವಂತರಾದ ದಾನಿಗಳು ಮೊಬೈಲ್ ನಂ: 97311 60568ಗೆ ಸಹಾಯ ಮಾಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X