ಭಾರತೀಯ ರುಪಾಯಿಗೆ ಹೊಸ ಚಿಹ್ನೆ
ನವದೆಹಲಿ,
ಜು. 16 : ಭಾರತದ ಕರೆನ್ಸಿ ರುಪಾಯಿಗೆ ಇತರ ಕರೆನ್ಸಿಗಳಂತೆ ಲಾಂಛನ ಇರಬೇಕೆಂಬ ಬಹುದಿನಗಳ ಬೇಡಿಕೆ ಈಡೇರಿದೆ. ಹಿಂದಿ 'ರ' ಅಕ್ಷರವನ್ನು ಹೋಲುವ ಈ ಹೊಸ ಲಾಂಛನಕ್ಕೆ ಕೇಂದ್ರ ಸರಕಾರ ಅಂತಿಮ ಸೀಲ್ ಒತ್ತಿದೆ. ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವೆ ಅಂಬಿಕಾ ಸೋನಿ ಸುದ್ದಿಗೋಷ್ಠಿಯಲ್ಲಿ ಇದನ್ನು ಪ್ರಕಟಿಸಿದರು. id="toptextpromo">ಐವರನ್ನೊಳಗೊಂಡ
ಸಮಿತಿ ಈ ಲಾಂಛನವನ್ನು ಅಂತಿಮಗೊಳಿಸಿದೆ. ವಿಶ್ವದ ಇತರ ರಾಷ್ಟ್ರಗಳ ಕರೆನ್ಸಿಗಳಾದ ಡಾಲರ್, ಯೆನ್, ಪೌಂಡ್, ಯುರೋ ಸಾಲಿಗೆ ಈಗ ಭಾರತೀಯ ರುಪಾಯಿಯೂ ಸೇರ್ಪಡೆಯಾಗಿದೆ. ರುಪಾಯಿ ಲಾಂಛನದ ವಿನ್ಯಾಸಕ್ಕಾಗಿ ಕೇಂದ್ರ ಸರಕಾರ ಸಾರ್ವಜನಿಕರ ಸಹಕಾರ ಕೇಳಿತ್ತು. ಈಗ ಆಯ್ಕೆಯಾಗಿರುವ ಲಾಂಛನವನ್ನು ಗುವಹಾಟಿಯ ಉದಯ್ ಕುಮಾರ್ ಎನ್ನುವ ಸ್ನಾತಕೋತ್ತರ ವಿದ್ಯಾರ್ಥಿ ಕಳುಹಿಸಿಕೊಟ್ಟಿದ್ದರು. id='are-slot-1' class='oiad oi-axt oiadv'> id='top-searched-articles'>ರೋಮನ್
ಮತ್ತು ದೇವನಾಗರಿ ಲಿಪಿಯನ್ನು ಹೋಲುವ ಈ ಹೊಸ ಲಾಂಛನ ಸಾರ್ವತ್ರಿಕವಾಗಿ ಮೆಚ್ಚುಗೆಗಳಿಸಲಿದೆ ಎಂದು ಉದಯ್ ಕುಮಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದುವರೆಗೆ ರೂಪಾಯಿಗೆ Rs ಅಥವಾ Re ಸಂಕೇತವಾಗಿತ್ತು. ಆದರೆ ಇದೇ ಸಂಕೇತವನ್ನು ಪಾಕಿಸ್ತಾನ, ನೇಪಾಳ ಮತ್ತು ಶ್ರೀಲಂಕಾ ದೇಶಗಳು ಕೂಡ ಬಳಸುತ್ತಿದ್ದವು. ಈ ಹೊಸ ಲಾಂಛನ ವಿನ್ಯಾಸ ಕಳುಹಿಸಿದ ವಿದ್ಯಾರ್ಥಿಗೆ ಕೇಂದ್ರ ಸರಕಾರ 2.5 ಲಕ್ಷ ರುಪಾಯಿ ಬಹುಮಾನ ಘೋಷಿಸಿದೆ.











Click it and Unblock the Notifications