ಮಗನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ತಾಯಿ!

Mother admits to having sex with son, jailed
ನ್ಯೂಯಾರ್ಕ್, ಜು. 14 : ತನ್ನ ಸ್ವಂತ ಮಗನ ಮೇಲೆ ಲೈಂಗಿಕ ಮತ್ತು ದೈಹಿಕ ದೌರ್ಜನ್ಯ ನಡೆಸಿ, ಆತನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ 36 ವರ್ಷದ ತಾಯಿಗೆ 9ರಿಂದ 30 ವರ್ಷ ಕಠಿಣ ಸಜೆ ವಿಧಿಸಲಾಗಿದೆ.

ಐಮಿ ಎಲ್ ಸ್ವೋರ್ಡ್ ಎಂಬ ಮಹಿಳೆ ತನ್ನ ಮಗ ಹಸುಳೆಯಿದ್ದಾಗಲೇ ದತ್ತು ನೀಡಿದ್ದಳು. ನಂತರ ಫೇಸ್ ಬುಕ್ ಸೋಷಿಯಲ್ ನೆಟ್ವರ್ಕಿಂಗ್ ವೆಬ್ ತಾಣದ ಮುಖಾಂತರ ಆತನನ್ನು ಮತ್ತೆ ಸಂಧಿಸಿದ ಆಕೆ, ತನ್ನ ಮಗನನ್ನು ಮಗನಂತೆ ನೋಡಲೇ ಇಲ್ಲ. ಬದಲಾಗಿ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಡೆಟ್ರಾಯಿಟ್ ಫ್ರೀ ಪ್ರೆಸ್ ವರದಿ ಮಾಡಿದೆ.

ಅವರಿಬ್ಬರದೂ ತಾಯಿ-ಮಗನ ಸಂಬಂಧವಾಗಿರಲೇ ಇಲ್ಲ. ಗೆಳೆಯ ಗೆಳತಿಯಂತೆ ಅವರಿಬ್ಬರ ಸಂಬಂಧವಿತ್ತು ಎಂದು ಸ್ವೋರ್ಡ್ ವಕೀಲ ಮಿಷೆಲ್ ರಿಬಿಟ್ವರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದರ ಬಗ್ಗೆ ಸ್ವೋರ್ಡ್ ಳಿಗೂ ಪಶ್ಚಾತ್ತಾಪವಿದೆ. ಕಾರಣವನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ಸದ್ಯಕ್ಕೆ ಆಕೆಗೆ ಆಪ್ತ ಸಲಹೆಯ ಅಗತ್ಯವಿದೆ ಎಂದು ವಕೀಲ ಹೇಳಿದ್ದಾರೆ.

ಆಕೆಯೊಂದಿಗೆ ಕೆಲಕಾಲವಿದ್ದು ತನ್ನನ್ನು ದತ್ತು ಪಡೆದವರೊಂದಿಗೆ ಮಗ ತೆರಳಿದ್ದ. ನಂತರ ಅವರಿಬ್ಬರ ನಡುವಿನ ಅನೈತಿಕ ಸಂಬಂಧದ ಬಗ್ಗೆ ತಿಳಿದುಬಂದಿದೆ. ದತ್ತು ಪಡೆದವರಿಗೆ ಆ ಹುಡುಗನೇ ಸ್ವೋರ್ಡ್ ಮಗ ಎಂದು ತಿಳಿದಿತ್ತು. ಮದುವೆಯಾಗಿರದಿದ್ದರೂ ಈ ಮಗನ ಹೊರತಾಗಿ ಸ್ವೋರ್ಡ್ ಳಿಗೆ ಇನ್ನೂ ಐವರು ಮಕ್ಕಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+