ಅಷ್ಟಪಾದಿ ಪಾಲ್ ಅಲೆನ್ ಸ್ತುತಿ

ಪಾಲಿಸೆಮ್ಮನು, ಭವಿಷ್ಯವನು ಉಸುರು.
ಕಾಲ್ಚೆಂಡಾಟದಲಿ ನಿಜ ನಿನ್ನ ನುಡಿಯು
ಮೇಲ್ಕೊಂಡಾಡುವೆನು 'ನಿನಗಾರು ಸರಿಯು?'
ಅಷ್ಟಪಾದಿಯೆ, ನೀನು ಈ ಬುವಿಗೆ
ಇಷ್ಟವಾಗಿಹೆ, ವಂದಿಸುವೆವೈ ನಿನಗೆ.
ಅಷ್ಟದಿಕ್ಕುಗಳಲ್ಲು ಅಹ ನಿನ್ನ ಸ್ತುತಿಯು!
ಅಷ್ಟದಿಗ್ಗಜಸಮಾನ ನಿನ್ನ್ ಮತಿಯು!
ಅಷ್ಟಮಂಗಲಸಹಿತ ಅರ್ಚಿಸುವೆವ್ ನಿನ್ನ
ಅಷ್ಟಾಂಗಸಹಿತ ಪೊಡಮಡುವೆವ್ ಚಿನ್ನ!
ಎಷ್ಟು ಹೊಗಳಿದರೂ ಕಮ್ಮಿ ನಿನ್ನನ್ನು
ಕಷ್ಟ ತಿಳಿವುದು ನಿನ್ನ ಅಂತರಂಗವನು
ಜ್ಯೋತಿಷವು ಶಾಸ್ತ್ರ; ಅದಲ್ಲ ಠಸ್‌ಪುಸ್
ಆದರದನಿಂದು ನುಡಿವುದು ಆಕ್ಟೊಪಸ್!












Click it and Unblock the Notifications