ಎಫ್ ಎಂ ವಾಹಿನಿಗಳಿಗೆ ಬಿಸಿ ಮುಟ್ಟಿಸಿದ ಠಾಕ್ರೆ
ಮುಂಬೈ,
ಜು.11: ಎಫ್ಎ ರೇಡಿಯೋ ಗಳ ಮೇಲೆ ಶಿವಸೇನಾ ಹುಲಿಗಳು ದಾಳಿ ಮಾಡಿದ್ದು, ತಮಗೆ ಬೇಕಾದ ಭಾಷೆಯ ಹಾಡುಗಳನ್ನೇ ಹಾಕುವಂತೆ ಆಗ್ರಹಿಸಿದೆ. id="toptextpromo">ಎಲ್ಲಾ
ಖಾಸಗಿ ಎಫ್ಎಂ ವಾಹಿನಿಗಳಿಗೆ ಎಚ್ಚರಿಕೆ ನೀಡಿರುವ ಬಾಳಾ ಠಾಕ್ರೆ ಒಂದು ವಾರದ ಗಡುವು ನೀಡಿದ್ದಾರೆ. ಎಫ್ ಎಂ ವಾಹಿನಿಗಳು ಪ್ರಾದೇಶಿಕ ಸಂಸ್ಕೃತಿಯನ್ನು ಬಿಂಬಿಸಬೇಕು. ಕೇವಲ ಮರಾಠಿ ಹಾಡುಗಳನ್ನಷ್ಟೇ ಪ್ರಸಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಎಫ್
ಎಂ ವಾಹಿನಿಗಳು ಮರಾಠಿ ಹಾಡುಗಳನ್ನು ಹಾಕುತ್ತಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ. ವಾರದೊಳಗೆ ಮರಾಠಿ ಹಾಡುಗಳು ಕೇಳಿ ಬರದಿದ್ದರೆ ಶಿವ ಸೇನೆ ದಾಳಿ ಮಾಡುವುದು ಖಚಿತ ಎಂದು ಠಾಕ್ರೆ ಗುಡುಗಿದ್ದಾರೆ. ಠಾಕ್ರೆ ಅವರ ನಿಲುವಿಗೆ ಕೌಸ್ತುಭ್ ಇನಾಂದರ್ ಸೇರಿದಂತೆ ಕೆಲ ಸಂಗೀತಗಾರರು ಸಹಮತ ವ್ಯಕ್ತಪಡಿಸಿದ್ದಾರೆ.ಈ ಹಿಂದೆ ಬೆಂಗಳೂರಿನಲ್ಲೂ ಇಂಥಹದ್ದೇ ಚಳವಳಿ, ಪ್ರತಿಭಟನೆ ನಡೆದು, ನಿಧಾನವಾಗಿ ಎಫ್ಎಂ ವಾಹಿನಿಗಳು ಪ್ರಾದೇಶಿಕ ಗೀತೆಗಳಿಗೆ ಒತ್ತು ಕೊಡತೊಡಗಿದವು.












Click it and Unblock the Notifications