ಟ್ವೀಟ್ ಮಾಡಿ ಕೆಲ್ಸ ಕಳೆದುಕೊಂಡ ಸಂಪಾದಕಿ

Ocatavia Nasr
ದುಬೈ, ಜು. 9: ಮೈಕ್ರೋ ಬ್ಲಾಗಿಂಗ್ ಟ್ವಿಟ್ಟರ್ ನಲ್ಲಿ ಮೃತನ ಆತ್ಮಕ್ಕೆ ಶಾಂತಿ ಕೋರಿ ಸಾಂತ್ವನ ಸಂದೇಶ ನೀಡಿದ್ದಕ್ಕೆ ಸಿಎನ್ಎನ್ ನ ಮಧ್ಯಪ್ರಾಚ್ಯದ ಹಿರಿಯ ಸಂಪಾದಕಿ ಕೆಲಸ ಕಳೆದುಕೊಳ್ಳಬೇಕಾಗಿ ಬಂದಿದೆ.

ಅಮೆರಿಕದ ಪಾಲಿಗೆ ಶತ್ರುವಾಗಿರುವ ಹಿಜ್ಬುಲ್ಲಾ ಶೇಖ್ ನಿಧನದ ಸುದ್ದಿ ಪ್ರತಿಕ್ರಿಯಿಸಿ, ಆತನ ಬಗ್ಗೆ ತನಗೆ ಗೌರವವಿದೆ ಎಂದು ಸಂಪಾದಕಿ ಆಕ್ಟಾವಿಯಾ ನಸರ್ ಟ್ವೀಟ್ ಮಾಡಿದ್ದು ಸಿಎನ್ ಎನ್ ಕೇಂದ್ರ ಕಚೇರಿಯಲ್ಲಿ ಹಿರಿಯ ಆಧಿಕಾರಿಗಳ ಕಣ್ಣು ಕೆಂಪಗಾಗಿಸಿದೆ.

ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವ ದಿ.ಮೊಹಮ್ಮದ್ ಹುಸೇನ್ ಫದ್ಲಲ್ಲಾಹ್ ಕುರಿತಂತೆ ಸಹಾನುಭೂತಿಯ ಸಂಸ್ಮರಣಾ ಹೇಳಿಕೆ ನೀಡಿ, ಫದಲ್ಲಲ್ಲಾಹ್ ನಿಧನರಾದ ಸುದ್ದಿ ಕೇಳಿ ವಿಷಾದವಾಯಿತು. ಅವರ ಬಗ್ಗೆ ತನಗೆ ಅಪಾರ ಗೌರವವಿದೆ ಎಂದು ಅಮೆರಿಕದ ನ್ಯೂಸ್ ಚಾನೆಲ್ ಸಿಎನ್ಎನ್‌ನ ಮಧ್ಯಪ್ರಾಚ್ಯ ವಿಭಾಗದ ಹಿರಿಯ ಸಂಪಾದಕಿ ಅಕ್ಟಾವಿಯಾ ನಾಸರ್ ಟ್ವೀಟ್ ಮಾಡಿದ್ದರು.

ಆದರೆ ಬಳಿಕ ಆಕೆ ಸಿಎನ್‌ಎನ್ ಡಾಟ್ ಕಾಮ್‌ಗೆ ನೀಡಿದ ಹೇಳಿಕೆಯಲ್ಲಿ ತನ್ನ ಹೇಳಿಕೆಗಾಗಿ ತೀವ್ರ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದ್ದರು.ತಾನು ಇಂತಹ ಆರೋಪ ಹೊಂದಿರುವ ವ್ಯಕ್ತಿಯ ಬಗೆಗೆ ಸರಿಯಾದ ನಿಲುವು ತಾಳುವಲ್ಲಿ ಎಡವಿದೆ. ತನಗೆ ಆ ವ್ಯಕ್ತಿಯ ಸಾಧನೆ ಮತ್ತು ಕಾರ್ಯಗಳ ಬಗೆಗೆ ತಪ್ಪು ಮಾಹಿತಿ ನೀಡಲಾಗಿತ್ತು ಎಂದಿದ್ದಾರೆ.

ಮೊಹಮ್ಮದ್ ಹುಸೇನ್ ಫದ್ಲಲ್ಲಾಹ್ ಅವರು ಮುಸ್ಲಿಂ ಮಹಿಳೆಯ ಸ್ವಾವಲಂಬನೆಗಾಗಿ ಹೋರಾಟ ಮಾಡಿದ್ದಾರೆ. ಪತ್ನಿಪೀಡಕ ಗಂಡಸರಿಗೆ ಪಾಠ ಕಲಿಸಿದ್ದಾರೆ. ಹಾಗಾಗಿ ನನಗೆ ಗೌರವವಿದೆ ಎಂದು ಆಕ್ಟಾವಿಯಾ ಹೇಳಿದ್ದಾರೆ.

ಅಮೆರಿಕ ವಿರೋಧಿ ನಿಲುವು ತಳೆದಿದ ಫದ್ಲಾಲ್ಲಾಹ್ , ಆತ್ಮಹತ್ಯಾ ದಳ ಸೃಷ್ಟಿಸುವಲ್ಲಿ ನಿಷ್ಣಾತನಾಗಿದ್ದ. 2008 ರಲ್ಲಿ ಇಸ್ರೇಲ್ ನಲ್ಲಿ 8 ಮಕ್ಕಳ ಬಲಿಗೆ ಕಾರಣನಾಗಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+