ಆಸ್ಟ್ರೇಲಿಯಾದಲ್ಲಿ ಒಬ್ಬ ಹೈ ಸ್ಪೀಡ್ ಅಜ್ಜಿ
ಮೆಲ್ಬೋರ್ನ್,
ಜು.8: 80 ರ ಹರೆಯ ಅಜ್ಜಿಗೆ ದೇಹ ಮುಪ್ಪಾದರೂ ಕುಗ್ಗದ ಉತ್ಸಾಹ, ಕಾರು ಓಡಿಸುವುದೆಂದರೆ ಎಲ್ಲಿಲ್ಲದ ಆನಂದ. ಆದರೆ, ಈ ಅಜ್ಜಿ ಸುಮಾರು 164 ಕಿ.ಮೀ/ಗಂ ವೇಗದಲ್ಲಿ ಕಾರು ಓಡಿಸಿದ್ದು ನೋಡಿ ಟ್ರಾಫಿಕ್ ಪೊಲೀಸರಿಗೆ ಅಚ್ಚರಿಯಾಗಿದೆ. ಅಜ್ಜಿಯನ್ನು ಹಿಡಿದು ಕೇಸ್ ದಾಖಲಿಸಿದ್ದಾರೆ. id="toptextpromo">ವಿಕ್ಟೋರಿಯಾ
ಪ್ರಾಂತ್ಯದ ಅತ್ಯಂತ ಹಿರಿಯ ಚಾಲಕಿಯಾಗಿರುವ ಈಕೆಗೆ ವೇಗದಲ್ಲಿ ಕಾರು ಚಾಲನೆ ಮಾಡುವುದೇ ಹುಚ್ಚು ಎಂದು ತಿಳಿದು ಬಂದಿದೆ. ಸರಿ ರಾತ್ರಿ 2 ಗಂಟೆ ವೇಳೆಯಲ್ಲಿ ಮರ್ರೆ ವ್ಯಾಲಿ ಹೈವೇ ಬಳಿ ಆಕೆಯನ್ನು ತಡೆ ಹಿಡಿದಾಗ ಆಕೆ 164 ಕಿ.ಮೀ/ಗಂಟೆ ವೇಗದಲ್ಲಿ ಕಾರು ಓಡಿಸಿದ್ದು ತಿಳಿದು ಬಂದಿದೆ. ಆ ಪ್ರದೇಶದಲ್ಲಿ 100 ಕಿ.ಮೀ ವೇಗಮಿತಿ ಇದೆ. id='are-slot-1' class='oiad oi-axt oiadv'> id='top-searched-articles'>ಅಷ್ಟೇ
ಅಲ್ಲ ಆಸೀಸ್ ಪೊಲೀಸರು ಈ ಹೈ ಸ್ಪೀಡ್ ಅಜ್ಜಿಯನ್ನು ಹಿಡಿಯಲು ಸುಮಾರು 4ಕಿ.ಮೀ ಚೇಸ್ ಮಾಡಿ, ಹಿಡಿದಿದ್ದಾರೆ. ಆಕೆಯ ಮೇಲೆ ಕೇಸ್ ದಾಖಲಿಸಿದ್ದು, ಆಕೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗ ಪಡಿಸಿಲ್ಲ ಎಂದು ದ ಕೊರಿಯರ್ ಮೇಲ್ ವರದಿಯಲ್ಲಿ ಹೇಳಲಾಗಿದೆ.











Click it and Unblock the Notifications