ಬ್ಲಾಕ್ ಮೇಲ್ ಗೆ ಸಿಕ್ತು ಬಿಎಸ್ಎನ್ಎಲ್ ಸಾಥ್

ಕರ್ನಾಟಕ ಟೆಲಿಕಾಂ ಕ್ಷೇತ್ರದಲ್ಲಿ ಬ್ಲಾಕ್ ಮೇಲ್ ಸೇವೆಯನ್ನು ಬಿಎಸ್ಎನ್ ಎಲ್ ಪರಿಚಯಿಸಲು ಮುಂದಾಗಿದೆ. ಈ ಮೂಲಕ ರಾಜ್ಯದ ಬಿಎಸ್ ಎನ್ ಎಲ್ ಗ್ರಾಹಕರು ಬ್ಲಾಕ್ ಮೇಲ್ ತಂತ್ರಾಂಶ ಬಳಸಿ ಸುಲಭವಾಗಿ ಈಮೇಲ್ ಓದಿ, ಪ್ರತಿಕ್ರಿಯಿಸಬಹುದು. ನಿಮ್ಮ ಮೊಬೈಲ್ ಗೆ ಬ್ಲಾಕ್ ಮೇಲ್ ಅನ್ನು ಇಳಿಸಿಕೊಳ್ಳಲು SMS (“BM ACTIVATE") to 50046 (ಸಂದೇಶ ಉಚಿತ) ಕಳಿಸಿ ಮೊಬೈಲ್ ನಲ್ಲಿ ಸ್ಥಾಪಿಸಿಕೊಳ್ಳಬಹುದು.
ಬ್ಲಾಕ್ ಬೇರಿ ಮುಂತಾದ ಸ್ಮಾರ್ಟ್ ಫೋನ್ ನಲ್ಲಿ ಸಿಗುವ ಈಮೇಲ್ ಆಧಾರಿತ ಸೌಲಭ್ಯಗಳನ್ನು ನಮ್ಮ ಗ್ರಾಹಕರಿಗೆ ಬ್ಲಾಕ್ ಮೇಲ್ ಮೂಲಕ ಪರಿಚಯಿಸಲಾಗುತ್ತಿದೆ. ರಾಜ್ಯದಲ್ಲಿ ಇದಕ್ಕೆ ಸಿಗುವ ಪ್ರತಿಕ್ರಿಯೆಯನ್ನು ನೋಡಿಕೊಂಡು ರಾಷ್ಟ್ರಾದ್ಯಂತ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಬಿಎಸ್ ಎನ್ ಎಲ್ ವಕ್ತಾರರು ಈ ಸಂದರ್ಭದಲ್ಲಿ ಹೇಳಿದರು.
ಏನಿದು ಬ್ಲಾಕ್ ಮೇಲ್: ಸಂಗೀತಾ, ಯೂನಿವರ್ಸೆಲ್ ಮುಂತಾದ ಮೊಬೈಲ್ ಮಳಿಗೆಗಳಲ್ಲಿ ರು.49 ನೀಡಿ ಬ್ಲಾಕ್ ಮೇಲ್ ಮೌಲ್ಯಾಧಾರಿತ ಸೇವೆ ಪಡೆಯಬಹುದು. ಜಿಪಿಆರ್ ಎಸ್ ಹಾಗೂ ಸ್ಮಾರ್ಟ್ ಫೋನ್ ನ ಸೌಲಭ್ಯ ಸಿಗುತ್ತದೆ. ಜಾವಾ ಸೌಲಭ್ಯ ಇರಬೇಕು. ಆರ್ಕುಟ್, ಫೇಸ್ ಬುಕ್, ನೌಕ್ರಿ, ಮಾನ್ ಸ್ಟರ್, ಯಾವುದೇ ತಾಣವನ್ನಾದರೂ ವೀಕ್ಷಿಸಬಹುದು.ಇಮೇಲ್ ಓದಿ, ಪ್ರತಿಕ್ರಿಯೆ ಮಾಡಲು ಸುಲಭ ಎಂದು ಫಿಫ್ತ್ ಸಿ ಸಲ್ಯೂಷನ್ ಸಂಸ್ಥೆ ಹೇಳುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: Fifth C Solutions Pvt. Ltd, Bangalore.
ದೂರವಾಣಿ: +91 80 221011 33/44












Click it and Unblock the Notifications