ಅತ್ಯಾಚಾರ : ಇದು ಉಂಡು ಹೋದ ಕೊಂಡು ಹೋದ ಕಥೆ
ಹೈದರಾಬಾದ್,
ಜು. 8 : ದುಷ್ಕರ್ಮಿಯೊಬ್ಬ ಬಂದೂಕು ತೋರಿಸಿ ಅಮೆರಿಕದ ಮಹಿಳೆ ಮೇಲೆ ಅತ್ಯಾಚಾರ ನಡೆಸಿ 5 ಲಕ್ಷ ರುಪಾಯಿಗಳನ್ನು ದೋಚಿಕೊಂಡ ಪರಾರಿಯಾಗಿರುವ ಘಟನೆ ಹೈದರಾಬಾದ್ ನ ಪ್ರತಿಷ್ಠಿತ ಬಡಾವಣೆ ಬಂಜಾರಾ ಹಿಲ್ಸ್ ನಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ. id="toptextpromo">ಬಂಜಾರಾ
ಹಿಲ್ಸ್ ನ ಉದ್ಯಮಿಯೊಬ್ಬರ ಬಂಗಲೆಯ ಮಹಡಿಯಲ್ಲಿ 25ರ ಹರೆಯದ ಅಮೆರಿಕದ ಮಹಿಳೆ ಒಬ್ಬಂಟಿಯಾಗಿ ವಾಸವಾಗಿದ್ದರು. ಬುಧವಾರ ರಾತ್ರಿ ದುಷ್ಕರ್ಮಿಯೊಬ್ಬ ಅಕ್ರಮವಾಗಿ ಪ್ರವೇಶಿಸಿ ಬಂದೂಕು ತೋರಿಸಿ ಮೊದಲು ಅತ್ಯಾಚಾರ ನಡೆಸಿದ್ದಾನೆ ನಂತರ ಆಕೆಯ ಬಳಿ ಇದ್ದ 5 ಲಕ್ಷ ರುಪಾಯಿಗಳನ್ನು ದೋಚಿಕೊಂಡ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೊಂದು ರೀತಿಯಲ್ಲಿ ಉಂಡು ಹೋದ ಕೊಂಡು ಹೋದ ಕಥೆಯನ್ನು ನೆನಪಿಸುವಂತಿದೆ. id='are-slot-1' class='oiad oi-axt oiadv'> id='top-searched-articles'>ಅತ್ಯಾಚಾರಕ್ಕೆ
ಒಳಗಾದ ಕ್ಲಿಂಟನ್ ಫೌಂಡೇಷನ್ ಉದ್ಯೋಗಿ ಎಂದು ಹೇಳಲಾಗಿದೆ. ಅತ್ಯಾಚಾರಕ್ಕೆ ಒಳಗಾದ ಯುವತಿ ದೂರನ್ನು ದಾಖಲಿಸಿದ್ದು, ಪೊಲೀಸರು ಆರೋಪಿ ಬಂಧನಕ್ಕೆ ಜಾಲ ಬೀಸಿದ್ದಾರೆ. ಯುವತಿಗೆ ನಗರದಲ್ಲಿ ಅನೇಕ ಗೆಳೆಯರಿದ್ದರು ಎನ್ನಲಾಗಿದೆ. ಆದರೆ, ಬಂಜಾರಾ ಹಿಲ್ಸ್ ನಲ್ಲಿರುವ ಬಡಾವಣೆಗಳಿಗೆ ಭಾರಿ ಭದ್ರತೆ ಇರುತ್ತದೆ. ಇದನ್ನೂ ಭೇದಿಸಿ ದುಷ್ಕರ್ಮಿ ಅಕ್ರಮವಾಗಿ ಪ್ರವೇಶಿಸಿ ಅತ್ಯಾಚಾರ ಎಸಗಿ, ಹಣ ದೋಚಿಕೊಂಡು ಪರಾರಿಯಾಗಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.











Click it and Unblock the Notifications