ಮದುವೆ ವಿರೋಧಿಸಿ ಲಿಂಗ ಬದಲಿಸಿಕೊಂಡ ವಕೀಲೆ
ಭುವನೇಶ್ವರ,
ಜು. 5 : ಮದುವೆಗೆ ಒಲ್ಲದ ವಕೀಲೆಯೊಬ್ಬರು ಲಿಂಗವನ್ನೇ ಬದಲಾಯಿಸಿಕೊಂಡ ಅಪರೂಪದ ಘಟನೆ ನಡೆದಿದೆ. ನಮ್ಮ ಸಮಾಜದ ಹೆಣ್ಣು ಮಕ್ಕಳ ಮೇಲೆ ಒತ್ತಾಯದಿಂದ ಹೇರಲಾಗುತ್ತಿರುವ ಕೌಟುಂಬಿಕ ಜೀವನ ನನಗೆ ಬೇಕಿಲ್ಲ ಎಂದು ವಕೀಲೆ ಸ್ಪಷ್ಟಪಡಿಸಿದ್ದಾರೆ. id="toptextpromo">ಜೂನ್
29 ರಂದು ಶಸ್ತ್ರಚಿಕಿತ್ಸೆಗೆ ಒಳಗಾದ ಪುರಿಯ 35ರ ಹರೆಯದ ಈ ಮಹಿಳೆ ಸದ್ಯ ಇನ್ನೂ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಲಿಂಗ ಪರಿವರ್ತನೆಗೆ ಮುನ್ನ ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ಸೂಚಿಸಿ ಆದೆ ವೈದ್ಯರಿಗೆ ಪ್ರಮಾಣ ಪತ್ರ ಸಲ್ಲಿಸಿದ್ದರು. ವಕೀಲೆ ಬೇರೊಬ್ಬ ಯುವತಿಯೊಂದಿಗೆ ಒಡನಾಟ ಹೊಂದಿದ್ದು, ಬದುಕಿನ ಉಳಿದ ದಿನಗಳನ್ನು ಆಕೆಯೊಂದಿಗೆ ಕಳೆಯಬೇಕೆಂಬ ಅಪೇಕ್ಷೆ ಹೊಂದಿದ್ದಾಳೆ ಎಂದು ವಕೀಲೆಯ ಆಪ್ತರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಏಳು
ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯನ್ನು ಹಲವು ವೈದ್ಯರು ಸೇರಿ ನೆರವೇರಿಸಿದರು. ಗರ್ಭಕೋಶ, ಅಂಡಾಶಯ, ಸ್ತನ ಇನ್ನಿತರ ಅಂಗಗಳನ್ನು ಅದೇ ಜಾಗಕ್ಕೆ ಪುರುಷ ಜನನಾಂಗಳನ್ನು ಕಸಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ವಕೀಲೆಯ ಜೀವನ ಪುರುಷನ ಗುಣಧರ್ಮಗಳನ್ನು ಹೊಂದಿರುತ್ತದೆ ಎಂದು ಪ್ಲಾಸ್ಟಿಕ್ ಮತ್ತು ಕಾಸ್ಮೆಟಿಕ್ ಸರ್ಜನ್ ಅಕ್ಷಯ್ ಕುಮಾರ್ ರಾವತ್ ತಿಳಿಸಿದ್ದಾರೆ.











Click it and Unblock the Notifications