30 ಸಾವಿರ ಉದ್ಯೋಗಿಗಳ ನೇಮಕ : ಟಿಸಿಎಸ್
ಮುಂಬೈ,
ಜು. 3 : ಪ್ರಸಕ್ತ ವರ್ಷದಲ್ಲಿ ಸುಮಾರು 30 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಟಾಟಾ ಕನ್ಸಲ್ಟನ್ಸಿ ಸರ್ವೀಸ್ ಚೇರಮನ್ ರತನ್ ಟಾಟಾ ಘೋಷಿಸಿದ್ದಾರೆ. id="toptextpromo">ಕಂಪನಿಯ
ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಕಂಪನಿಗೆ 30 ಸಾವಿರದಷ್ಟು ಉದ್ಯೋಗಿಗಳ ಅವಶ್ಯಕತೆ ಇದೆ. ಈಗಾಗಲೇ ನಾಲ್ಕನೇ ಕ್ವಾರ್ಟರ್ ಅವಧಿಯಲ್ಲಿ 16,851 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿರುವುದಾಗಿ ರತನ್ ಟಾಟಾ ಹೇಳಿದರು. ಇತ್ತೀಚೆಗೆ ಟಿಸಿಎಸ್ ಆದಾಯ ಗಮನಾರ್ಹ ರೀತಿಯಲ್ಲಿ ಏರಿಕೆಯಾಗಿದ್ದು, ಸಾಫ್ಟ್ ವೇರ್ ಮಾರುಕಟ್ಟೆಯಲ್ಲಿ ಉತ್ತಮ ಹಾಗೂ ವಿಶ್ವಾಸಾರ್ಹ ಕಂಪನಿಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. id='are-slot-1' class='oiad oi-axt oiadv'> id='top-searched-articles'>ಈಗಾಗಲೇ
ಕಂಪನಿಯಲ್ಲಿ 1,60 ಲಕ್ಷ ಉದ್ಯೋಗಿಗಳು ಕಾರ್ವನಿರ್ವಹಿಸುತ್ತಿದ್ದಾರೆ. ಭಾರತದಲ್ಲಿ ದೊಡ್ಡ ಕಂಪನಿ ಎನಿಸಿರುವ ಟಿಸಿಎಸ್, ಮುಂದಿನ ದಿನಗಳಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದೆ. ಅಮೆರಿಕ, ಯೋರೋಪ ರಾಷ್ಟ್ರಗಳಲ್ಲಿ ಆರ್ಥಿಕ ಕುಸಿತ ಮಾಯವಾಗಿದ್ದು, ಸಾಫ್ಟ್ ವೇರ್ ಮಾರುಕಟ್ಟೆ ಚೇತರಿಸಿಕೊಂಡಿರುವುದು ಸಂತಸದ ಸಂಗತಿ ಎಂದು ಟಾಟಾ ವಿವರಿಸಿದರು.











Click it and Unblock the Notifications