ವಿದ್ಯಾರ್ಥಿನಿಯನ್ನೇ ರೇಪ್ ಮಾಡಿದ ಪಾಪಿ ಶಿಕ್ಷಕ

ವಿದ್ಯಾರ್ಥಿನಿಗೆ ಇರುವ ಖಾಯಿಲೆಯ ಲಾಭ ಪಡೆದು ಆರೋಪಿ ರಾಮಚಂದ್ರ ನಡಾರ್ ರೇಪ್ ಮಾಡಿದ್ದಾನೆ. ವಿದ್ಯಾರ್ಥಿನಿಗಳೊಂದಿಗೆ ಅಸಭ್ಯ ಭಂಗಿಯಲ್ಲಿದ್ದ ಆರೋಪಿಯನ್ನು ಕಂಡ ನೆರೆ ಮನೆಯವರು ವಿದ್ಯಾರ್ಥಿನಿಯ ಪೋಷಕರಿಗೆ ವಿಷಯ ತಿಳಿಸಿದ್ದರು. ಮೇ ತಿಂಗಳಿನಿಂದ ಹುಡುಕಾಟ ನಡೆಸಿದ್ದ ಖಾರ್ ಪ್ರದೇಶದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿದ್ದಾರೆ.
ಬಾಲಿವುಡ್ ಸ್ಟಾರ್ ಗಳಿಂದ ಹಿಡಿದು, ಶ್ರೀಮಂತರ ಮನೆ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ ಆರೋಪಿ ರಾಮಚಂದ್ರ ನಡಾರ್ ಎಂಬ ಶಿಕ್ಷಕ, ಗಂಟೆಗೆ 12 ಸಾವಿರ ರು ಟ್ಯೂಷನ್ ಫೀ ವಸೂಲು ಮಾಡುತ್ತಿದ್ದ.
ಇಂಟರ್ ನೆಟ್ ನಲ್ಲಿ ಟ್ಯೂಷನ್ ಬಗ್ಗೆ ಆಕರ್ಷಕ ಜಾಹೀರಾತು ನೀಡಿ, ಬಾಲಿವುಡ್ ನ ತಾರೆಯರನ್ನು ಸೆಳೆದಿದ್ದ. ಈಗ ಇವನನ್ನು ಬಂಧಿಸಿದ ಮೇಲೆ ಇವನಿಂದ ಮೋಸ ಹೋದವರು ಇನ್ನಷ್ಟು ಜನ ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಖಾತ್ ಪೊಲೀಸ್ ಠಾಣಾಧಿಕಾರಿ ಹೇಳುತ್ತಾರೆ.
ಬಿಎಸ್ಸ್ಸಿ, ಎಂಎ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಮಗ ಹಾಗೂ ಮಗಳು ವಿದೇಶದಲ್ಲಿ ಓದುತ್ತಿದ್ದಾರೆ. ರಷ್ಯಾದಲ್ಲಿ ಮಾಸ್ಟರ್ ಡಿಗ್ರಿ ಅಭ್ಯಸಿಸುತ್ತಿದ್ದಾರೆ ಎಂದು ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾನೆ.












Click it and Unblock the Notifications