ಮೆಡಿಕಲ್ ಕೋರ್ಸ್ ಗಳಿಗೆ ಸಿಇಟಿ : ಎಂಸಿಐ
ನವದೆಹಲಿ,
ಜೂ. 30 : ವೈದ್ಯಕೀಯ ಕೋರ್ಸ್ ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ) ಚಿಂತನೆ ನಡೆಸಿದೆ. ವೈದ್ಯಕೀಯ ಶಿಕ್ಷಣವನ್ನು ಸಂಪೂರ್ಣವಾಗಿ ಆರೋಗ್ಯ ಸಚಿವಾಲಯದ ನಿಯಂತ್ರಣಕ್ಕೆ ಒಳಪಡಿಸಬೇಕೆಂಬ ಇಂಗಿತವನ್ನೂ ಮೇ 24 ರಂದು ಅಸ್ತಿತ್ವಕ್ಕೆ ಬಂದಿರುವ ಆಡಳಿತ ಮಂಡಳಿ ವ್ಯಕ್ತಪಡಿಸಿದೆ. id="toptextpromo">ಡಾ
ಎಸ್ ಕೆ ಸರೀನ್ ನೇತೃತ್ವದ ಮಂಡಳಿಯು ಮುಂದಿನ ವರ್ಷದಿಂದ ದೇಶಾದ್ಯಂತ ವೈದ್ಯಕೀಯ ಕೋರ್ಸ್ ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಬೇಕೆಂಬ ಪ್ರಸ್ತಾವವನ್ನು ಮಂಡಿಸಿದೆ. ಈ ಪರೀಕ್ಷೆಯು ವೈದ್ಯಕೀಯ ಪ್ರವೇಶ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳ ತೊಂದರೆಯನ್ನು ನಿವಾರಿಸಲಿದೆ. 10-12 ವಿಭಿನ್ನ ಪರೀಕ್ಷೆಗಳನ್ನು ಪರೀಕ್ಷೆಗಳನ್ನು ಎದುರಿಸಬೇಕಾಗಿದೆ. ಹೊಸ ಪ್ರಸ್ತಾವಕ್ಕೆ ಸಿಬಿಎಸ್ಇ ಉತ್ಸಾಹ ತೋರಿದೆ ಎಂದು ಸರೀನ್ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಉದ್ದೇಶಿತ
ಸಿಇಟಿ ಖಾಸಗಿ ಮತ್ತು ಸರಕಾರಿ ವೈದ್ಯಕೀಯ ಕಾಲೇಜುಗಳು ನಡೆಸುವ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಅನ್ವಯವಾಗಲಿದೆ. ಮಂಡಳಿಯ ಪ್ರಕಾರ, ದೇಶದಲ್ಲಿ 32 ಸಾವಿರ ವೈದ್ಯಕೀಯ ಸೀಟುಗಳು ಹಾಗೂ 13 ಸಾವಿರ ಸ್ನಾತಕೋತ್ತರ ಸೀಟುಗಳು ಇವೆ.











Click it and Unblock the Notifications